ADVERTISEMENT

ಚೆನ್ನೈ ಮೂಲದ ಖಾಸಗಿ ಕಂಪನಿ: ನೌಕರರಿಗೆ ಕಾರು, ಬೈಕ್‌ ಉಡುಗೊರೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2024, 15:40 IST
Last Updated 12 ಅಕ್ಟೋಬರ್ 2024, 15:40 IST
<div class="paragraphs"><p>ಉದ್ಯೋಗಿಗಳಿಗೆ ಕಾರು ಉಡುಗೊರೆ&nbsp;</p></div>

ಉದ್ಯೋಗಿಗಳಿಗೆ ಕಾರು ಉಡುಗೊರೆ 

   

‌ಚೆನ್ನೈ (ಪಿಟಿಐ): ನೌಕರರು ಉತ್ತಮವಾಗಿ ಕೆಲಸ ಮಾಡಿದರಷ್ಟೇ ಖಾಸಗಿ ಕಂಪನಿಗಳ ಶ್ರೇಯೋಭಿವೃದ್ಧಿ ಸಾಧ್ಯ. ಹಾಗಾಗಿ, ಹಲವು ಕಂಪನಿಗಳು ನೌಕರರಿಗೆ ವಾರ್ಷಿಕವಾಗಿ ಉಡುಗೊರೆ ನೀಡುವ ಮೂಲಕ ಅವರ ಶ್ರಮಕ್ಕೆ ಪ್ರೋತ್ಸಾಹ ನೀಡುತ್ತದೆ. ಇದು ಕಂಪನಿಗಳ ಉತ್ಪಾದಕತೆ ಹೆಚ್ಚಳಕ್ಕೂ ನೆರವಾಗಲಿದೆ.

ಇದಕ್ಕೆ ನಿದರ್ಶನ ಎಂಬಂತೆ ಇಲ್ಲಿನ ಸ್ಟ್ರಕ್ಚರಲ್‌ ಸ್ಟೀಲ್‌ ಡಿಸೈನ್‌ ಕಂಪನಿಯೊಂದು ಉತ್ತಮ ಸೇವೆ ಸಲ್ಲಿಸಿದ ತನ್ನ ನೌಕರರಿಗೆ 28 ಕಾರುಗಳು ಮತ್ತು 29 ಬೈಕ್‌ಗಳನ್ನು ಉಡುಗೊರೆಯಾಗಿ ನೀಡಿದೆ.

ADVERTISEMENT

ನೌಕರರ ಶ್ರಮ ಮತ್ತು ಬದ್ಧತೆಗೆ ಅನುಗುಣವಾಗಿ ಹುಂಡೈ, ಟಾಟಾ, ಮಾರುತಿ ಸುಜುಕಿ ಮತ್ತು ಮರ್ಸಿಡೆಸ್ ಬೆಂಜ್‌ ಕಾರುಗಳನ್ನು ನೀಡಲಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ್‌ ಕಣ್ಣನ್‌, ‘ಕಂಪನಿಯ ಯಶಸ್ಸಿನಲ್ಲಿ ನೌಕರರ ಪಾಲು ದೊಡ್ಡದಿದೆ. ಅದನ್ನು ಗುರುತಿಸುವುದು ನಮ್ಮ ಜವಾಬ್ದಾರಿ’ ಎಂದು ತಿಳಿಸಿದ್ದಾರೆ.

‘ಜೀವನದಲ್ಲಿ ಕಾರು ಅಥವಾ ಬೈಕ್‌ ಖರೀದಿಸುವುದು ನೌಕರರ ಕನಸಾಗಿರುತ್ತದೆ. ಕಂಪನಿಯಲ್ಲಿ 180 ನೌಕರರು ಇದ್ದಾರೆ. ಈ ಪೈಕಿ ಉತ್ತಮ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರೋತ್ಸಾಹ ನೀಡಲಾಗಿದೆ. 2022ರಲ್ಲಿ ನಾಲ್ವರು ಹಿರಿಯ ಸಹೋದ್ಯೋಗಿಗಳಿಗೆ ಕಾರನ್ನು ಉಡುಗೊರೆಯಾಗಿ ನೀಡಲಾಗಿತ್ತು. ಪ್ರಸ್ತುತ ಕಾರು ಮತ್ತು ಬೈಕ್‌ಗಳನ್ನು ನೀಡಲಾಗಿದೆ’  ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.