ADVERTISEMENT

ನ್ಯಾನೊ ಕಾರ್‌ನ ಪಯಣ ಅಂತ್ಯ?

ಪಿಟಿಐ
Published 5 ಜುಲೈ 2018, 2:35 IST
Last Updated 5 ಜುಲೈ 2018, 2:35 IST
   

ನವದೆಹಲಿ: ಟಾಟಾ ಮೋಟರ್ಸ್‌ನ ಅತ್ಯಂತ ಅಗ್ಗದ ಕಾರ್‌ ಖ್ಯಾತಿಯ ನ್ಯಾನೊ ತಯಾರಿಕೆಯು ಸ್ಥಗಿತಗೊಳಿಸುವ ಹಾದಿಯಲ್ಲಿ ಇರುವಂತೆ ಕಂಡುಬರುತ್ತಿದೆ.

ತಯಾರಿಕೆ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬರಲಾಗಿಲ್ಲ ಎಂದು ಕಂಪನಿ ಹೇಳಿಕೊಂಡಿದ್ದರೂ, ಜೂನ್‌ ತಿಂಗಳಲ್ಲಿ ಕೇವಲ ಒಂದು ಕಾರನ್ನು ತಯಾರಿಸಿರುವುದು ಈ ಅನುಮಾನ ಪುಷ್ಟೀಕರಿಸುತ್ತದೆ.

ರತನ್‌ ಟಾಟಾ ಅವರ ಕನಸಿನ ಕಾರ್‌ ಎಂದೇ ಪರಿಗಣಿತವಾಗಿದ್ದ ಈ ಪುಟ್ಟ ಕಾರ್‌, 2009ರಲ್ಲಿ ಮಾರುಕಟ್ಟೆಗೆ ಬಂದಿತ್ತು. ಇದರ ಆರಂಭಿಕ ಬೆಲೆ ₹ 1 ಲಕ್ಷಕ್ಕೆ ನಿಗದಿಪಡಿಸಲಾಗಿತ್ತು.

ADVERTISEMENT

‘ನ್ಯಾನೊ ತಯಾರಿಕೆಯು ಸಂಸ್ಥೆಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿತ್ತು. ಭಾವನಾತ್ಮಕ ಕಾರಣಗಳಿಗಾಗಿ ಇದರ ತಯಾರಿಕೆ ಮುಂದುವರೆಸಲಾಗಿತ್ತು’ ಎಂದು ಟಾಟಾ ಸನ್ಸ್‌ನ ಪದಚ್ಯುತ ಅಧ್ಯಕ್ಷ ಸೈರಸ್‌ ಮಿಸ್ತ್ರಿ ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.