ADVERTISEMENT

ಪಿಎಫ್ ಬಡ್ಡಿ: ಆಂಶಿಕ ಪಾವತಿ

ಪಿಟಿಐ
Published 9 ಸೆಪ್ಟೆಂಬರ್ 2020, 16:25 IST
Last Updated 9 ಸೆಪ್ಟೆಂಬರ್ 2020, 16:25 IST
   

ನವದೆಹಲಿ: ಕಾರ್ಮಿಕರ ಭವಿಷ್ಯನಿಧಿಗೆ (ಪಿಎಫ್‌) ಸಂಬಂಧಿಸಿದ, 2019–20ನೇ ಸಾಲಿನ ಶೇಕಡ 8.5ರ ಬಡ್ಡಿಯ ಮೊತ್ತದಲ್ಲಿ ಒಂದು ಭಾಗವನ್ನು ಪಾವತಿ ಮಾಡಲು ಕಾರ್ಮಿಕರ ಭವಿಷ್ಯನಿಧಿ ಸಂಘಟನೆ (ಇಪಿಎಫ್‌ಒ) ಬುಧವಾರ ತೀರ್ಮಾನಿಸಿದೆ.

ಸಂಘಟನೆಯು ಈಗ ಶೇ 8.15ರಷ್ಟು ಬಡ್ಡಿಯ ಮೊತ್ತವನ್ನು ಪಿಎಫ್‌ ಖಾತೆಗಳಿಗೆ ಜಮಾ ಮಾಡಲಿದೆ. ಇನ್ನುಳಿದ ಶೇ 0.35ರಷ್ಟು ಬಡ್ಡಿ ಮೊತ್ತವನ್ನು ಸಂಘಟನೆಯು ಡಿಸೆಂಬರ್‌ ತಿಂಗಳಿನಲ್ಲಿ ಪಾವತಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಇಟಿಎಫ್‌ಗಳಲ್ಲಿ (ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್ಸ್‌) ತಾನು ಮಾಡಿದ್ದ ಒಂದಿಷ್ಟು ಹೂಡಿಕೆಯನ್ನು ನಗದಾಗಿ ಪರಿವರ್ತಿಸಿಕೊಂಡು, ಶೇ 8.5ರಷ್ಟು ಬಡ್ಡಿ ನೀಡುವಾಗ ಎದುರಾಗುವ ಹಣಕಾಸಿನ ಕೊರತೆಯನ್ನು ಭರ್ತಿ ಮಾಡಿಕೊಳ್ಳಲು ಇಪಿಎಫ್‌ಒ ತೀರ್ಮಾನಿಸಿತ್ತು. ಆದರೆ, ಷೇರು ಮಾರುಕಟ್ಟೆಯಲ್ಲಿನ ಅನಿಶ್ಚಿತತೆಯ ಕಾರಣದಿಂದಾಗಿ ಇಪಿಎಫ್‌ಒ ಹಾಗೆ ಮಾಡಿಲ್ಲ ಎಂದು ಮೂಲಗಳು ವಿವರಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.