ADVERTISEMENT

ಇಪಿಎಫ್‌ಒ: ದಾಖಲೆ ಸಲ್ಲಿಕೆಗೆ ಅವಧಿ ವಿಸ್ತರಣೆ

ಪಿಟಿಐ
Published 4 ಜನವರಿ 2024, 13:44 IST
Last Updated 4 ಜನವರಿ 2024, 13:44 IST
ಇಪಿಎಫ್‌ಒ
ಇಪಿಎಫ್‌ಒ   

ನವದೆಹಲಿ: ಗರಿಷ್ಠ ಪಿಂಚಣಿ ಕೋರಿ ಉದ್ಯೋಗಿಗಳು ಸಲ್ಲಿಸಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಉದ್ಯೋಗದಾತ ಸಂಸ್ಥೆಗಳು, ವೇತನದ ವಿವರ ಹಾಗೂ ಇತರೆ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡುವ ಅವಧಿಯನ್ನು ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್ಒ) ಮೇ 31ರವರೆಗೆ ವಿಸ್ತರಿಸಿದೆ. 

‌ಹೆಚ್ಚಿನ ವೇತನ ಆಧಾರದ ಮೇಲೆ ಗರಿಷ್ಠ ಪಿಂಚಣಿ ಪಡೆಯುವ ಸಂಬಂಧ ಉದ್ಯೋಗಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ (ಉದ್ಯೋಗಿ ಮತ್ತು ಉದ್ಯೋಗದಾತ ಸಂಸ್ಥೆಯ ಜಂಟಿ ಘೋಷಣೆ ಸಹಿತ). ಈ ಅರ್ಜಿಗಳಿಗೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಅಪ್‌ಲೋಡ್‌ ಮಾಡುವ ಗಡುವನ್ನು ಈ ಮೊದಲು 2023ರ ಡಿಸೆಂಬರ್‌ 31ರವರೆಗೆ ನಿಗದಿಪಡಿಸಲಾಗಿತ್ತು ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ತಿಳಿಸಿದೆ.

ಜಂಟಿ ಘೋಷಣೆಗೆ ಸಂಬಂಧಿಸಿದಂತೆ 3.6 ಲಕ್ಷಕ್ಕೂ ಹೆಚ್ಚು ಅರ್ಜಿಗಳ ಮೌಲ್ಯಮಾಪನ ಬಾಕಿ ಇದೆ. ಉದ್ಯೋಗದಾತ ಸಂಸ್ಥೆಗಳು ಇನ್ನೂ ಈ ಅರ್ಜಿಗಳಿಗೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ಅಪ್‌ಲೋಡ್‌ ಮಾಡಿಲ್ಲ ಎಂದು ತಿಳಿಸಿದೆ.

ADVERTISEMENT

ಉದ್ಯೋಗಿಗಳ ಪಿಂಚಣಿ (ತಿದ್ದುಪಡಿ) 2014ರ ಯೋಜನೆಯ (ಇಪಿಎಸ್‌) ಸಿಂಧುತ್ವವನ್ನು 2022ರಲ್ಲಿ ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.