ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಪ್ರಸಕ್ತ ಹಣಕಾಸು ವರ್ಷದ ಅಕ್ಟೋಬರ್‌ವರೆಗೆ ವಿನಿಮಯ ವಹಿವಾಟು ನಿಧಿಗಳಲ್ಲಿ (ಇಟಿಎಫ್) ಒಟ್ಟು ₹27,105 ಕೋಟಿ ಹೂಡಿಕೆ ಮಾಡಿದೆ.
ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವ ರಾಮೇಶ್ವರ ತೆಲಿ ಅವರು, ಸೋಮವಾರ ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.
2015ರ ಆಗಸ್ಟ್‌ನಿಂದ ಇಟಿಎಫ್‌ನಲ್ಲಿ ಹೂಡಿಕೆ ಮಾಡುವುದನ್ನು ಇಪಿಎಫ್‌ಒ ಆರಂಭಿಸಿತ್ತು. 2022–23ರ ಹಣಕಾಸು ವರ್ಷದಲ್ಲಿ ₹53,081 ಕೋಟಿ, 2021–22ರಲ್ಲಿ ₹43,568 ಕೋಟಿ ಹೂಡಿಕೆ ಮಾಡಿದೆ ಎಂದು ಸಚಿವರು ತಿಳಿಸಿದ್ದಾರೆ.
2016–17ರಲ್ಲಿ ₹14,983 ಕೋಟಿ, 2017–18ರಲ್ಲಿ ₹24,790 ಕೋಟಿ, 2018–19ರಲ್ಲಿ ₹27,974 ಕೋಟಿ, 2019–20ರಲ್ಲಿ ₹31,501 ಕೋಟಿ, 2020–21ರಲ್ಲಿ ₹32,071 ಕೋಟಿಯನ್ನು ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಲಾಗಿತ್ತು ಎಂದು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.