ADVERTISEMENT

ಪಿ.ಎಫ್. ಬಡ್ಡಿ: ಮಾ. 4ರಂದು ಚರ್ಚೆ ಸಾಧ್ಯತೆ

ಪಿಟಿಐ
Published 16 ಫೆಬ್ರುವರಿ 2021, 16:03 IST
Last Updated 16 ಫೆಬ್ರುವರಿ 2021, 16:03 IST
ಇಪಿಎಫ್‌ಒ
ಇಪಿಎಫ್‌ಒ   

ನವದೆಹಲಿ: ನೌಕರರ ಭವಿಷ್ಯನಿಧಿ ಸಂಘಟನೆಯು (ಇಪಿಎಫ್‌ಒ) ಪಿ.ಎಫ್‌. ಠೇವಣಿಗಳಿಗೆ 2020–21ನೇ ಸಾಲಿಗೆ ನೀಡುವ ಬಡ್ಡಿ ದರ ಎಷ್ಟಿರಬೇಕು ಎಂಬ ವಿಚಾರವನ್ನು ಮಾರ್ಚ್‌ 4ರಂದು ಚರ್ಚೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ಸಂಘಟನೆಯ ಧರ್ಮದರ್ಶಿಗಳ ಸಭೆಯು ಮಾ. 4ರಂದು ಶ್ರೀನಗರದಲ್ಲಿ ನಡೆಯಲಿದೆ.

2020–21ನೇ ಸಾಲಿನ ಬಡ್ಡಿ ದರವನ್ನು ಸಂಘಟನೆಯು ತಗ್ಗಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಇವೆ. 2019–20ನೇ ಸಾಲಿನ ಸಂಘಟನೆಯು ಪಿ.ಎಫ್‌. ಠೇವಣಿಗಳಿಗೆ ಶೇ 8.5ರಷ್ಟು ಬಡ್ಡಿ ನೀಡಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.