ADVERTISEMENT

ಈಕ್ವಿಟಿ ಎಫ್‌.ಎಂ. ಹೂಡಿಕೆ ಶೇ 10ರಷ್ಟು ಇಳಿಕೆ

ಪಿಟಿಐ
Published 10 ಅಕ್ಟೋಬರ್ 2024, 13:32 IST
Last Updated 10 ಅಕ್ಟೋಬರ್ 2024, 13:32 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಸೆಪ್ಟೆಂಬರ್‌ನಲ್ಲಿ ಈಕ್ವಿಟಿ ಮ್ಯೂಚುವಲ್‌ ಫಂಡ್‌ ಮಾರುಕಟ್ಟೆಯಲ್ಲಿ ₹34,419 ಕೋಟಿ ಬಂಡವಾಳ ಹೂಡಿಕೆಯಾಗಿದೆ.

ಆದರೆ, ಆಗಸ್ಟ್‌ನಲ್ಲಿ ಹೂಡಿಕೆಯಾಗಿದ್ದ ಬಂಡವಾಳಕ್ಕೆ ಹೋಲಿಸಿದರೆ ಶೇ 10ರಷ್ಟು ಇಳಿಕೆಯಾಗಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಗುರುವಾರ ತಿಳಿಸಿದೆ.

ಒಟ್ಟಾರೆ ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ ಮ್ಯೂಚುವಲ್‌ ಫಂಡ್‌ ವಲಯದಿಂದ ಬಂಡವಾಳದ ಹೊರಹರಿವು ಪ್ರಮಾಣ ಹೆಚ್ಚಿದೆ. ಈ ಎರಡು ತಿಂಗಳಿನಲ್ಲಿ ಕ್ರಮವಾಗಿ ₹1.08 ಲಕ್ಷ ಕೋಟಿ ಹಾಗೂ ₹71,114 ಕೋಟಿ ಬಂಡವಾಳ ಹೊರಹೋಗಿದೆ. 

ADVERTISEMENT

ಆದರೆ, ಇದೇ ಅವಧಿಯಲ್ಲಿ ಸಾಲಪತ್ರ ಮಾರುಕಟ್ಟೆಯಲ್ಲಿ ಒಟ್ಟಾರೆ ₹1.14 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಿದೆ. 

ಬಂಡವಾಳ ಹೊರಹರಿವಿನ ಪ್ರಮಾಣ ಹೆಚ್ಚಳದ ಹೊರತಾಗಿಯೂ ಸೆಪ್ಟೆಂಬರ್‌ನಲ್ಲಿ ಈ ಉದ್ಯಮದ ಸಂಪತ್ತಿನ ನಿರ್ವಹಣಾ ಮೌಲ್ಯವು (ಎಯುಎಂ) ₹67 ಲಕ್ಷ ಕೋಟಿಯಷ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.