ADVERTISEMENT

ಈಕ್ವಿಟಿ ಎಂ.ಎಫ್‌: ಹೂಡಿಕೆ ಶೇ 16ರಷ್ಟು ಇಳಿಕೆ

​ಪ್ರಜಾವಾಣಿ ವಾರ್ತೆ
Published 9 ಮೇ 2024, 16:21 IST
Last Updated 9 ಮೇ 2024, 16:21 IST
   

ನವದೆಹಲಿ: ಏಪ್ರಿಲ್‌ನಲ್ಲಿ ಈಕ್ವಿಟಿ ಮ್ಯೂಚುಯಲ್‌ ಫಂಡ್ಸ್‌ನಲ್ಲಿ ಬಂಡವಾಳದ ಒಳಹರಿವು ಶೇ 16ರಷ್ಟು ಕುಸಿತ ಕಂಡಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಮಾಹಿತಿ ನೀಡಿದೆ.

ಮಾರ್ಚ್‌ನಲ್ಲಿ ₹22,633 ಕೋಟಿ ಹೂಡಿಕೆ ಆಗಿತ್ತು. ಏಪ್ರಿಲ್‌ನಲ್ಲಿ ₹18,917 ಕೋಟಿ ಹೂಡಿಕೆಯಾಗಿದೆ ಎಂದು ಎಎಂಎಫ್‌ಐ ತಿಳಿಸಿದೆ.

ಲಾರ್ಜ್‌ ಕ್ಯಾಪ್‌ ಫಂಡ್‌ನಲ್ಲಿ ಒಳಹರಿವು ಕಡಿಮೆಯಾಗಿದೆ. ಅಲ್ಲದೆ, ಲೋಕಸಭಾ ಚುನಾವಣೆಯಿಂದಾಗಿ ಮಾರುಕಟ್ಟೆಯಲ್ಲಿ ಅಸ್ಥಿರತೆ ಹೆಚ್ಚಾಗಿದೆ. ಹಾಗಾಗಿ, ಒಳಹರಿವು ಇಳಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ADVERTISEMENT

ಎಸ್‌ಐಪಿ ಹೆಚ್ಚಳ: 

ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ) ಮೂಲಕ  ಏಪ್ರಿಲ್‌ನಲ್ಲಿ ₹20,371 ಕೋಟಿ ಹೂಡಿಕೆಯಾಗಿದೆ. ಮಾರ್ಚ್‌ನಲ್ಲಿ ₹19,271 ಕೋಟಿ ಹೂಡಿಕೆಯಾಗಿತ್ತು. ಏಪ್ರಿಲ್‌ನಲ್ಲಿ 63.65 ಲಕ್ಷ ಹೊಸ ಖಾತೆಗಳು ನೋಂದಣಿ ಆಗಿದ್ದು, ಒಟ್ಟು ಖಾತೆಗಳ ಸಂಖ್ಯೆ 8.7 ಕೋಟಿಗೆ ಮುಟ್ಟಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.