ADVERTISEMENT

ಈಕ್ವಿಟಿ ಎಂಎಫ್‌: ₹34,697 ಕೋಟಿ ಹೂಡಿಕೆ

ಪಿಟಿಐ
Published 10 ಜೂನ್ 2024, 14:38 IST
Last Updated 10 ಜೂನ್ 2024, 14:38 IST
   

ನವದೆಹಲಿ: ಮೇ ತಿಂಗಳಲ್ಲಿ ಈಕ್ವಿಟಿ ಮ್ಯೂಚುಯಲ್‌ ಫಂಡ್ಸ್‌ನಲ್ಲಿ (ಎಂ.ಎಫ್‌) ₹34,697 ಕೋಟಿ ದಾಖಲೆಯ ಬಂಡವಾಳದ ಒಳಹರಿವಾಗಿದೆ.

ಏಪ್ರಿಲ್‌ನಲ್ಲಿ ₹18,917 ಕೋಟಿ ಒಳಹರಿವಾಗಿತ್ತು. ಈ ಹೂಡಿಕೆಗೆ ಹೋಲಿಸಿದರೆ ಶೇ 83ರಷ್ಟು ಹೆಚ್ಚಳವಾಗಿದೆ ಎಂದು ಭಾರತೀಯ ಮ್ಯೂಚುಯಲ್ ಫಂಡ್ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಸೋಮವಾರ ತಿಳಿಸಿದೆ.

ಎಸ್‌ಐಪಿ ಹೆಚ್ಚಳ: ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ) ಮೂಲಕ ಮೇನಲ್ಲಿ ₹20,904 ಕೋಟಿ ಹೂಡಿಕೆಯಾಗಿದೆ. ಏಪ್ರಿಲ್‌ನಲ್ಲಿ ₹20,371 ಕೋಟಿ ಹೂಡಿಕೆಯಾಗಿತ್ತು ಎಂದು ತಿಳಿಸಿದೆ. ಸತತ ಎರಡನೇ ತಿಂಗಳು ಸಹ ಹೂಡಿಕೆಯು ₹20 ಸಾವಿರ ಕೋಟಿ ದಾಟಿದೆ.

ADVERTISEMENT

ಒಟ್ಟಾರೆಯಾಗಿ, ಮ್ಯೂಚುಯಲ್‌ ಫಂಡ್‌ ಉದ್ಯಮವು ಮೇನಲ್ಲಿ ₹1.1 ಲಕ್ಷ ಕೋಟಿ ಬಂಡವಾಳ ಒಳಹರಿವಾಗಿದೆ. ಏಪ್ರಿಲ್‌ನಲ್ಲಿ ₹2.4 ಲಕ್ಷ ಕೋಟಿ ಹೂಡಿಕೆಯಾಗಿತ್ತು. ಈಕ್ವಿಟಿ ಹಾಗೂ ಸಾಲ ಯೋಜನೆಗಳಲ್ಲಿನ ಹೂಡಿಕೆಯಿಂದಾಗಿ ಒಳಹರಿವು ಹೆಚ್ಚಾಗಿದೆ. ಈ ಒಳಹರಿವಿನೊಂದಿಗೆ, ಉದ್ಯಮದಲ್ಲಿ ಸಂಗ್ರಹವಾದ ಒಟ್ಟು ಮೊತ್ತವು (ಎಯುಎಂ) ₹57.26 ಲಕ್ಷ ಕೋಟಿಯಿಂದ ₹58.91 ಲಕ್ಷ ಕೋಟಿಗೆ ಹೆಚ್ಚಳವಾಗಿದೆ.

ಎನ್‌ಡಿಎ ನೇತೃತ್ವದ ಸರ್ಕಾರವು ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ನಿರೀಕ್ಷೆಯು ಹೂಡಿಕೆದಾರರನ್ನು ಖರೀದಿ ಮಾಡುವಂತೆ ಪ್ರೇರೇಪಿಸಿತು. ಮುಂದಿನ ದಿನಗಳಲ್ಲಿ ಒಳಹರಿವು ಮತ್ತಷ್ಟು ಏರಿಕೆಯಾಗಲಿದೆ ಎಂದು ಮಾರ್ನಿಂಗ್‌ಸ್ಟಾರ್‌ ಇನ್‌ವೆಸ್ಟ್‌ಮೆಂಟ್ಸ್‌ ರಿಸರ್ಚ್ ಇಂಡಿಯಾದ ಸಹ ನಿರ್ದೇಶಕ (ಸಂಶೋಧನಾ ವಿಭಾಗ) ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.