ನವದೆಹಲಿ: ಸೆಪ್ಟೆಂಬರ್‌ನಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್ (ಎಂ.ಎಫ್) ಮಾರುಕಟ್ಟೆಯಲ್ಲಿ ₹34,419 ಕೋಟಿ ಬಂಡವಾಳ ಹೂಡಿಕೆಯಾಗಿದೆ.
ಆಗಸ್ಟ್‌ನಲ್ಲಿ ₹38,239 ಕೋಟಿ ಹೂಡಿಕೆಯಾಗಿತ್ತು. ಇದಕ್ಕೆ ಹೋಲಿಸಿದರೆ ಶೇ 10ರಷ್ಟು ಇಳಿಕೆಯಾಗಿದೆ. ಲಾರ್ಜ್‌ಕ್ಯಾಪ್ ಫಂಡ್‌ಗಳಲ್ಲಿ ಹೂಡಿಕೆ ಪ್ರಮಾಣ ಕಡಿಮೆಯಾಗಿದ್ದರಿಂದ ಒಳಹರಿವಿನಲ್ಲಿ ಕುಸಿತವಾಗಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಗುರುವಾರ ತಿಳಿಸಿದೆ.
ಸೆಪ್ಟೆಂಬರ್‌ನಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆಯಡಿ (ಎಸ್‌ಐಪಿ) ₹24,509 ಕೋಟಿ ಹೂಡಿಕೆಯಾಗಿದೆ. ಆಗಸ್ಟ್‌ನಲ್ಲಿ ₹23,547 ಕೋಟಿ ಹೂಡಿಕೆಯಾಗಿತ್ತು. ಹೂಡಿಕೆದಾರರಲ್ಲಿ ಎಸ್‌ಐಪಿಯತ್ತ ಒಲವು ಹೆಚ್ಚಿದೆ ಎಂದು ತಿಳಿಸಿದೆ.
‘ಇದು ಶಿಸ್ತುಬದ್ಧ ಮತ್ತು ದೀರ್ಘಾವಧಿಯ ಸಂಪತ್ತು ಕ್ರೋಡೀಕರಣದತ್ತ ಹೂಡಿಕೆದಾರರ ಮನೋಭಾವ ಬದಲಾಗುತ್ತಿರುವುದನ್ನು ತೋರಿಸುತ್ತದೆ’ ಎಂದು ಎಎಂಎಫ್‌ಐನ ಮುಖ್ಯ ಕಾರ್ಯ ನಿರ್ವಾಹಕ ವೆಂಕಟ್ ಚಲಸಾನಿ ಹೇಳಿದ್ದಾರೆ.
ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಮ್ಯೂಚುವಲ್ ಫಂಡ್ ವಲಯದಿಂದ ಬಂಡವಾಳದ ಹೊರಹರಿವು ಪ್ರಮಾಣ ಹೆಚ್ಚಿದೆ. ಈ ಎರಡು ತಿಂಗಳಿನಲ್ಲಿ ಕ್ರಮವಾಗಿ ₹1.08 ಲಕ್ಷ ಕೋಟಿ ಹಾಗೂ ₹71,114 ಕೋಟಿ ಬಂಡವಾಳ ಹೊರಹೋಗಿದೆ.
ಆದರೆ, ಇದೇ ಅವಧಿಯಲ್ಲಿ ಸಾಲಪತ್ರ ಮಾರುಕಟ್ಟೆಯಲ್ಲಿ ಒಟ್ಟಾರೆ ₹1.14 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಿದೆ.
ಬಂಡವಾಳದ ಹೊರಹರಿವಿನ ಪ್ರಮಾಣ ಹೆಚ್ಚಳದ ಹೊರತಾಗಿಯೂ ಸೆಪ್ಟೆಂಬರ್‌ನಲ್ಲಿ ಈ ಉದ್ಯಮದ ಸಂಪತ್ತಿನ ನಿರ್ವಹಣಾ ಮೌಲ್ಯವು (ಎಯುಎಂ) ₹67 ಲಕ್ಷ ಕೋಟಿಯಷ್ಟಿದೆ. ಆಗಸ್ಟ್‌ನಲ್ಲಿ ₹66.7 ಲಕ್ಷ ಕೋಟಿ ಇತ್ತು.
‘ಮ್ಯೂಚುವಲ್ ಫಂಡ್ ಉದ್ಯಮದಲ್ಲಿ ಹೂಡಿಕೆದಾರರ ಸಂಖ್ಯೆ 5 ಕೋಟಿ ದಾಟಿದೆ’ ಎಂದು ಚಲಸಾನಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.