ಸ್ಟಾಕ್‌ಹೋಮ್: ಸ್ವೀಡನ್ ಮೂಲದ ಟೆಲಿಕಾಂ ಕಂಪನಿ ಎರಿಕ್ಸನ್, ತನ್ನ ವೆಚ್ಚ ಕಡಿತ ಯೋಜನೆಯ ಭಾಗವಾಗಿ 8,500 ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುವುದಾಗಿ ತಿಳಿಸಿದೆ. ಈ ಸಂಬಂಧ ಉದ್ಯೋಗಿಗಳಿಗೆ ಮೆಮೊ ಕಳುಹಿಸಲಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಸ್ವೀಡನ್‌ನಲ್ಲಿ ಒಟ್ಟು 1,400 ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿರುವುದಾಗಿ ಕಂಪನಿಯು ಸೋಮವಾರ ಪ್ರಕಟಿಸಿತ್ತು.
ದೂರಸಂಪರ್ಕ ಕಂಪನಿಗಳು ಆರ್ಥಿಕ ಪರಿಸ್ಥಿತಿಯ ಕಾರಣ ಹೇಳಿ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ವಜಾ ಮಾಡುತ್ತಿವೆಯಾದರೂ, ಇದು (ಎರಿಕ್ಸನ್ ಕಂಪನಿಯ ವಜಾ ಮಾಡಿರುವುದು) ಟೆಲಿಕಾಂ ಕ್ಷೇತ್ರದ ದೊಡ್ಡ ಉದ್ಯೋಗ ಕಡಿತವಾಗಿದೆ.
'ಉದ್ಯೋಗ ಕಡಿತವು ದೇಶದಿಂದ ದೇಶಕ್ಕೆ ಅಲ್ಲಿನ ಪರಿಸ್ಥಿತಿಗೆ ಅನುಸಾರವಾಗಿ ಭಿನ್ನವಾಗಿರುತ್ತದೆ. ಹಲವು ದೇಶಗಳಲ್ಲಿ ಕೆಲಸಗಾರರನ್ನು ವಜಾ ಮಾಡುವ ಬಗ್ಗೆ ಮೆಮೊ ನೀಡಲಾಗಿದೆ' ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬೊರ್ಜ್ ಎಖೋಲ್ಮ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.