ಬೆಂಗಳೂರು: ನಗರದ ನವೋದ್ಯಮ ಕಂಪನಿ ಅಲ್ಟ್ರಾವಯೋಲೆಟ್ ಆಟೊಮೋಟಿವ್ ತಯಾರಿಸಿರುವ ಎಫ್–77 ಸ್ಪೋರ್ಟ್ಸ್ ಸ್ತರದ ವಿದ್ಯುತ್‌ಚಾಲಿತ ಬೈಕ್‌ಗಳನ್ನು ಯುರೋಪಿಯನ್ ಒಕ್ಕೂಟದ ಮಾರುಕಟ್ಟೆಗಳಿಗೆ ರಫ್ತು ಮಾಡುವ ಪ್ರಕ್ರಿಯೆಗೆ ಮಂಗಳವಾರ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ‘ಅಲ್ಟ್ರಾವಯೋಲೆಟ್ ಕಂಪನಿಯು ಇ.ವಿ ಬೈಕ್‌ಗಳನ್ನು ರಫ್ತು ಮಾಡುತ್ತಿರುವುದು ಭಾರತದ ಆಟೊಮೋಟಿವ್ ಉದ್ಯಮದಲ್ಲಿ ಪ್ರಮುಖ ಘಟ್ಟವಾಗಲಿದೆ. ಜಾಗತಿಕವಾಗಿ ಭಾರತದ ಉತ್ಪನ್ನಗಳು ಪೈಪೋಟಿ ನೀಡುವ ಸಾಮರ್ಥ್ಯಕ್ಕೆ ಇದು ಪುಷ್ಟಿ ನೀಡಿದೆ’ ಎಂದರು.
ಭಾರತದ ನವೋದ್ಯಮಗಳು ಎಲೆಕ್ಟ್ರಿಕ್ ಮೊಬಿಲಿಟಿ ಕ್ಷೇತ್ರದಲ್ಲಿ ಹೊಸತನಕ್ಕೆ ಪ್ರಾಮುಖ್ಯತೆ ನೀಡುತ್ತಿವೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಭಾರತವನ್ನು ವಿದ್ಯುತ್ ಚಾಲಿತ ವಾಹನಗಳ ತಯಾರಿಕಾ ವಲಯವನ್ನಾಗಿ ರೂಪಿಸಲು ಕೇಂದ್ರ ಸರ್ಕಾರ ದಿಟ್ಟಹೆಜ್ಜೆ ಇಟ್ಟಿದೆ. ಸರ್ಕಾರದ ದೂರದೃಷ್ಟಿಗೆ ಇದು ಪೂರಕವಾಗಿದೆ ಎಂದರು.
ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ‘ವಿದ್ಯುತ್‌ಚಾಲಿತ ವಾಹನಗಳ ಕ್ರಾಂತಿಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಜಾಗತಿಕ ಗುಣಮಟ್ಟದ ಬೈಕ್‌ಗಳನ್ನು ತಯಾರಿಸಿ ರಫ್ತು ಮಾಡುತ್ತಿರುವ ಅಲ್ಟ್ರಾವಯೊಲೆಟ್ ಕಂಪನಿಯನ್ನು ‘ಭಾರತದ ಟೆಸ್ಲಾ’ ಎಂದು ಬಣ್ಣಿಸಬಹುದು ಎಂದರು.
ಕಂಪನಿಯ ಸಹ ಸ್ಥಾಪಕ ಮತ್ತು ಸಿಇಒ ನಾರಾಯಣ್ ಸುಬ್ರಮಣಿಯಂ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.