ಮುಂಬೈ: ವಿದ್ಯುತ್ ಚಾಲಿತ (ಇ.ವಿ.) ವಾಹನಗಳ ರಿಟೇಲ್ ಮಾರಾಟವು ನವೆಂಬರ್‌ನಲ್ಲಿ ಶೇ 25.5ರಷ್ಟು ಹೆಚ್ಚಾಗಿ 1.52 ಲಕ್ಷಕ್ಕೆ ತಲುಪಿದೆ ಎಂದು ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಗುರುವಾರ ಹೇಳಿದೆ.
2022ರ ನವೆಂಬರ್‌ನಲ್ಲಿ 1.21 ಲಕ್ಷ ಇ–ವಾಹನಗಳು ಮಾರಾಟ ಆಗಿದ್ದವು ಎಂದು ಒಕ್ಕೂಟವು ಮಾಹಿತಿ ನೀಡಿದೆ.
ಈ ವರ್ಷದ ನವೆಂಬರ್‌ನಲ್ಲಿ ಇ–ದ್ವಿಚಕ್ರ ವಾಹನ ಮಾರಾಟ ಶೇ 18.82ರಷ್ಟು ಹೆಚ್ಚಾಗಿದ್ದು, 91,243ಕ್ಕೆ ಏರಿಕೆ ಕಂಡಿದೆ. 2022ರ ನವೆಂಬರ್‌ನಲ್ಲಿ 76,791 ಇ–ದ್ವಿಚಕ್ರ ವಾಹನಗಳು ಮಾರಾಟ ಆಗಿದ್ದವು ಎಂದು ತಿಳಿಸಿದೆ.
ಇ–ತ್ರಿಚಕ್ರ ವಾಹನ ಮಾರಾಟವು 40,619 ರಿಂದ 53,766ಕ್ಕೆ ಶೇ 32.37ರಷ್ಟು ಏರಿಕೆ ಕಂಡಿದೆ. ವಿದ್ಯುತ್ ಚಾಲಿತ ಪ್ರಯಾಣಿಕ ವಾಹನ ಮಾರಾಟ 3,983 ರಿಂದ 7,064ಕ್ಕೆ (ಶೇ 77.35ರಷ್ಟು) ಏರಿಕೆ ಕಂಡುಬಂದಿದೆ. ಇ–ಬಸ್‌ಗಳ ಮಾರಾಟ 203 ರಿಂದ 533ಕ್ಕೆ ಏರಿಕೆ ಕಂಡಿದೆ. ವರ್ಷದಿಂದ ವರ್ಷಕ್ಕೆ ಶೇ 162ರಷ್ಟು ಬೆಳವಣಿಗೆ ಕಂಡುಬಂದಿದೆ ಎಂದು ಒಕ್ಕೂಟ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.