ನವದೆಹಲಿ: ದೇಶದ ರಫ್ತು ವಹಿವಾಟು ಮೌಲ್ಯವು ಏಪ್ರಿಲ್‌ನಲ್ಲಿ ₹ 3.09 ಲಕ್ಷ ಕೋಟಿಗೆ ತಲುಪಿದೆ. 2021ರ ಏಪ್ರಿಲ್‌ನಲ್ಲಿ ₹ 1.54 ಲಕ್ಷ ಕೋಟಿ ಮೌಲ್ಯದ ರಫ್ತು ವಹಿವಾಟು ನಡೆದಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಶೇಕಡ 30.7ರಷ್ಟು ಹೆಚ್ಚಾಗಿದೆ.
ಪೆಟ್ರೋಲಿಯಂ ಉತ್ಪನ್ನಗಳು, ಎಲೆಕ್ಟ್ರಾನಿಕ್ಸ್ ಸರಕುಗಳು ಮತ್ತು ರಾಸಾಯನಿಕ ವಲಯಗಳ ಉತ್ತಮ ಸಾಧನೆಯಿಂದ ಈ ಪ್ರಮಾಣದ ಬೆಳವಣಿಗೆ ಸಾಧ್ಯವಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ.
ವ್ಯಾಪಾರ ಕೊರತೆ ಅಂತರ ₹ 1.17 ಲಕ್ಷ ಕೋಟಿಯಿಂದ ₹ 1.54 ಲಕ್ಷ ಕೋಟಿಗೆ ಏರಿಕೆ ಆಗಿದೆ. ಆಮದು ವಹಿವಾಟು 2022 ಏಪ್ರಿಲ್‌ನಲ್ಲಿ ₹ 4.64 ಲಕ್ಷ ಕೋಟಿಗೆ ಏರಿಕೆ ಆಗಿದ್ದು, 2021ರ ಏಪ್ರಿಲ್‌ಗೆ ಹೋಲಿಸಿದರೆ ಶೇ 31ರಷ್ಟು ಹೆಚ್ಚಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.