ADVERTISEMENT

ಬದಲಾದ ‘ಫೇರ್‌ & ಲವ್ಲಿ’ ರಂಗು: ಅದು ಇನ್ನು ‘ಗ್ಲೋ & ಲವ್ಲಿ’

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 12:46 IST
Last Updated 3 ಜುಲೈ 2020, 12:46 IST
ಫೇರ್‌ ಆಂಡ್‌ ಲವ್ಲಿ
ಫೇರ್‌ ಆಂಡ್‌ ಲವ್ಲಿ   

ದಶಕಗಳ ಕಾಲ ಭಾರತೀಯರ ತ್ವಚೆಗೆ ಬಣ್ಣ ಮತ್ತು ಕಾಂತಿ ನೀಡಿದ್ದ ‘ಫೆರ್‌ & ಲವ್ಲಿ’ ಫೆರ್‌ನೆಸ್ ಕ್ರೀಮ್ ಈಗ ತನ್ನ ಬಣ್ಣ ಮತ್ತು ಹೆಸರನ್ನು ಬದಲಾಯಿಸಿಕೊಂಡಿದೆ.ಇನ್ನು ಮುಂದೆ ಬದಲಾದ‌ ಹೊಸ ರಂಗು, ಹೆಸರಿನೊಂದಿಗೆ ಮಾರುಕಟ್ಟೆಗೆ ಬರಲಿದೆ.

‘ಫೇರ್ ಆಂಡ್‌ ಲವ್ಲಿ’ ಇನ್ನು ಮುಂದೆ‘ಗ್ಲೋ ಆಂಡ್‌ ಲವ್ಲಿ’ ಎಂಬ ಹೊಸ ಹೆಸರಿನಲ್ಲಿ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ. ಪುರುಷರು ಉಪಯೋಗಿಸುವ ಕ್ರೀಮ್‌ ಹೆಸರನ್ನು ‘ಗ್ಲೋ ಅಂಡ್‌ ಹ್ಯಾಂಡ್‌ಸಮ್‌’ ಬದಲಾಯಿಸಲಾಗಿದೆ ಎಂದುಹಿಂದೂಸ್ತಾನ್‌ ಯುನಿಲಿವರ್‌ ಕಂಪನಿ ಹೇಳಿದೆ.

ಇದಕ್ಕೆಲ್ಲ ಕಾರಣ ಅಮೆರಿಕದಲ್ಲಿ ವರ್ಣಭೇದ ನೀತಿಯ ವಿರುದ್ಧ ಆರಂಭವಾಗಿರುವ ಪ್ರತಿಭಟನೆ. ಅಮೆರಿಕದಲ್ಲಿ ಜಾರ್ಜ್‌ ಫ್ಲಾಯ್ಡ್‌‌ ಎಂಬ ಕಪ್ಪುವರ್ಣಿಯನ ಅಮಾನುಷ ಹತ್ಯೆಯ ನಂತರ ವರ್ಣಭೇದದ ವಿರುದ್ಧ ಭುಗಿಲೆದ್ದ ಆಕ್ರೋಶ ಮತ್ತು ಶುರುವಾದ ‘ಬ್ಲ್ಯಾಕ್‌ ಲೈವ್ಸ್ ಮ್ಯಾಟರ್ಸ್’ ಅಭಿಯಾನದ ಬಿಸಿ ‘ಫೇರ್‌ ಆಂಡ್‌ ಲವ್ಲಿ’ಗೂ ತಟ್ಟಿದೆ.

ADVERTISEMENT

ಪ್ರತಿಭಟನೆಯ ಬಿಸಿಗೆ ಹಿಂದೂಸ್ತಾನ್ ಯುನಲಿವರ್ ಕಂಪನಿಯ ‘ಫೇರ್‌ & ಲವ್ಲಿ’ ಮಾತ್ರವಲ್ಲ, ಇನ್ನುಳಿದ ಕಂಪನಿಗಳ ಅನೇಕ ಫೇರ್‌ನೆಸ್‌ ಕ್ರೀಮ್‌ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳ ಹೆಸರುಗಳು ಬದಲಾಗುತ್ತಿವೆ.

‘ಫೇರ್ ಅಂಡ್‌ ಲವ್ಲಿ’ಗೆ ಅಮೆರಿಕದ ನಂತರ ಭಾರತ ಎರಡನೇ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಕಪ್ಪು ಬಣ್ಣದ ಚರ್ಮವನ್ನು ತುಚ್ಛವಾಗಿ ಕಾಣುವ ‘ಫೇರ್‌ & ಲವ್ಲಿ’ ಮತ್ತು ಇತರ ಸೌಂದರ್ಯವರ್ಧಕ ಜಾಹೀರಾತುಗಳ ವಿರುದ್ಧ 2016ರಲ್ಲಿ #unfairandlovely ಅಭಿಯಾನ ಆರಂಭವಾಗಿತ್ತು.

ಭಾರತದ ಮಾರುಕಟ್ಟೆಯಲ್ಲಿರುವ ‘ಕ್ಲೀನ್ ಆಂಡ್‌ ಕ್ಲಿಯರ್’‌ ಫೇರ್‌ನೆಸ್‌ ಬ್ರಾಂಡ್‌ ಹೆಸರನ್ನೂ ಬದಲಾಯಿಸುವುದಾಗಿ ಜಾನ್ಸನ್‌ & ಜಾನ್ಸನ್‌ ಕಂಪನಿ ಹೇಳಿದೆ.

ಮುಂದಿನ ದಿನಗಳಲ್ಲಿ ಮಾರುಕಟ್ಟೆಗಳಲ್ಲಿರುವ ಸೌಂದರ್ಯ ವರ್ಧಕ ಮತ್ತು ಫೇರ್‌ನೆಸ್‌ ಕ್ರೀಮ್‌ಗಳ ಹೆಸರಿನಲ್ಲಿರುವ ‘ಫೇರ್’, ‘ವೈಟ್ನಿಂಗ್‌‘ ಮತ್ತು ‘ಲೈಟ್ನಿಂಗ್‌’ ಮುಂತಾದ ಪದಗಳು ಕಾಣೆಯಾಗಲಿವೆ. ಈ ಬ್ರಾಂಡ್‌ಗಳು ಹೊಸ ಹೆಸರಿನೊಂದಿಗೆ ಮಾರುಕಟ್ಟೆ ಪ್ರವೇಶಿಸಲಿವೆ. ಇದು ಕೇವಲ ‘ಫೇರ್‌ ಆಂಡ್‌ ಲವ್ಲಿ’ಯಷ್ಟೇ ಅಲ್ಲದೇ, ಉಳಿದ ಬ್ರಾಂಡ್‌ಗಳೂ ಈ ದಿಸೆಯಲ್ಲಿ ಚಿಂತನೆ ನಡೆಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.