ADVERTISEMENT

ಕಾಫಿ ಧಾರಣೆ ಕುಸಿತ: ಒಂದೇ ದಿನದಲ್ಲಿ ₹160 ಇಳಿಕೆ, ಬೆಳೆಗಾರರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 12 ಜನವರಿ 2023, 19:45 IST
Last Updated 12 ಜನವರಿ 2023, 19:45 IST
ಮೂಡಿಗೆರೆ ತಾಲ್ಲೂಕಿನ ಸಬ್ಬೇನಹಳ್ಳಿ ಬಳಿ ಗಿಡದಲ್ಲೇ ಹಣ್ಣಾಗಿ ಒಣಗಿರುವ ಕಾಫಿ
ಮೂಡಿಗೆರೆ ತಾಲ್ಲೂಕಿನ ಸಬ್ಬೇನಹಳ್ಳಿ ಬಳಿ ಗಿಡದಲ್ಲೇ ಹಣ್ಣಾಗಿ ಒಣಗಿರುವ ಕಾಫಿ   

ಮೂಡಿಗೆರೆ (ಚಿಕ್ಕಮಗಳೂರು ಜಿಲ್ಲೆ): ಕಾಫಿ ಕಟಾವು ಕಾರ್ಯ ಮುಕ್ತಾಯ ಹಂತಕ್ಕೆ ಬರುತ್ತಿದ್ದಂತೆ ಮಾರುಕಟ್ಟೆಯಲ್ಲಿ ಕಾಫಿ ಧಾರಣೆ ಗಣನೀಯವಾಗಿ ಇಳಿಕೆ ಕಂಡಿದೆ.

ತಾಲ್ಲೂಕಿನಲ್ಲಿ ಅರೇಬಿಕಾ ತಳಿ ಕಾಫಿ ಕಟಾವು ಬಹುತೇಕ ಪೂರ್ಣಗೊಂಡಿದೆ. ರೋಬಾಸ್ಟಾ ತಳಿಯು ಶೇ 75ರಷ್ಟು ಕಟಾವು ಪೂರ್ಣಗೊಂಡಿದೆ. ಈ ಎರಡೂ ತಳಿಗಳ ಕಾಫಿ ಬೆಲೆಯು ದಿನದಿಂದ ದಿನಕ್ಕೆ ಇಳಿಯುತ್ತಿದೆ.

ಮೂಡಿಗೆರೆ ವ್ಯಾಪ್ತಿಯಲ್ಲಿ ರೋಬಾಸ್ಟಾ ಚೆರಿ ಪ್ರಮಾಣವೇ ಹೆಚ್ಚಾಗಿದ್ದು, ವಾರದ ಹಿಂದೆ 50 ಕೆ.ಜಿ ಚೀಲಕ್ಕೆ ₹ 4,550 ಇದ್ದ ಧಾರಣೆಯು ಗುರುವಾರ ₹ 4,370ಕ್ಕೆ ಇಳಿದಿದೆ. ಒಂದೇ ದಿನದಲ್ಲಿ ಬೆಲೆ ₹ 160 ಇಳಿಕೆಯಾಗಿದೆ.

ADVERTISEMENT

ಅರೇಬಿಕಾ ಪಾರ್ಚ್‌ಮೆಂಟ್ ಬೆಲೆ ಮೂರು ದಿನಗಳ ಹಿಂದೆ 50 ಕೆ.ಜಿ ಚೀಲಕ್ಕೆ ₹ 13,750ರಷ್ಟಿತ್ತು. ಗುರುವಾರ ಇದು ₹ 13,500ಕ್ಕೆ ಇಳಿಕೆ ಕಂಡಿದೆ

‘ಈ ಬಾರಿ ಇಳುವರಿ ಕಡಿಮೆಯಾಗಿರುವುದರಿಂದ ಪೂರೈಕೆ ಕಡಿಮೆಯಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ಪೂರೈಕೆಯಲ್ಲಿ ಆಗುವ ವ್ಯತ್ಯಾಸಗಳು ಭಾರತದ ಕಾಫಿ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತವೆ’ ಎನ್ನುತ್ತಾರೆ ಕಾಫಿ ಬೆಳೆಗಾರ ಪ್ರವೀಣ್.

‘ಈಗಿರುವ ದರವು ತೀರಾ ಕಡಿಮೆ ಅಲ್ಲ. ಆದರೆ, ಇಳುವರಿ ಕಡಿಮೆ ಇರುವುದರಿಂದ ಬೆಳೆಗಾರರಿಗೆ ಹೆಚ್ಚುವರಿ ಲಾಭ ಲಭಿಸದು. ಹಾಕಿದ ಬಂಡವಾಳಕ್ಕೆ ಸಮವಾಗುತ್ತದೆ’ ಎನ್ನುತ್ತಾರೆ ಕಾಫಿ ಬೆಳೆಗಾರ ತಳವಾರ ಸಂತೋಷ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.