ADVERTISEMENT

ಫಾಸ್ಟ್ರ್ಯಾಕ್‌: ಅತ್ಯಂತ ತೆಳುವಾದ ಸ್ಮಾರ್ಟ್‌ ಬ್ಯಾಂಡ್‌ ರಿಫ್ಲೆಕ್ಸ್‌ ವೇವ್‌

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2018, 20:00 IST
Last Updated 29 ನವೆಂಬರ್ 2018, 20:00 IST
ಟೈಟಾನ್‌ ಕಂಪನಿಯ ಸಿಇಒ ರವಿಕಾಂತ್ ಮತ್ತು ಧರಿಸಬಲ್ಲ ಸಾಧನಗಳ ವ್ಯವಹಾರ ಮುಖ್ಯಸ್ಥ ಸೋಂಪ್ರಭ್‌ ಸಿಂಗ್ ಹೊಸ ಸ್ಮಾರ್ಟ್‌ ಬ್ಯಾಂಡ್‌ ಬಿಡುಗಡೆ ಮಾಡಿದರು  ಪ್ರಜಾವಾಣಿ ಚಿತ್ರ
ಟೈಟಾನ್‌ ಕಂಪನಿಯ ಸಿಇಒ ರವಿಕಾಂತ್ ಮತ್ತು ಧರಿಸಬಲ್ಲ ಸಾಧನಗಳ ವ್ಯವಹಾರ ಮುಖ್ಯಸ್ಥ ಸೋಂಪ್ರಭ್‌ ಸಿಂಗ್ ಹೊಸ ಸ್ಮಾರ್ಟ್‌ ಬ್ಯಾಂಡ್‌ ಬಿಡುಗಡೆ ಮಾಡಿದರು  ಪ್ರಜಾವಾಣಿ ಚಿತ್ರ   

ಬೆಂಗಳೂರು: ಫಾಸ್ಟ್ರ್ಯಾಕ್‌ ಕಂಪನಿಯು ವಿಶ್ವದಲ್ಲಿಯೇ ಅತಿ ತೆಳುವಾದ (9 ಎಂಎಂ) ಸ್ಮಾರ್ಟ್‌ ಬ್ಯಾಂಡ್‌ ‘ರಿಫ್ಲೆಕ್ಸ್‌ ವೇವ್‌’ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ ಸಾಧನವು ಗೆಸ್ಚರ್‌ ಕಂಟ್ರೋಲ್‌ ಮೂಲಕ ಕಾರ್ಯನಿರ್ವಹಿಸುತ್ತದೆ.ಬೆಲೆ ₹ 4,995. ಮೊಬೈಲ್‌ ಜತೆ ಸಂಪರ್ಕಿಸಿದರೆ, ಕರೆ ನಿರಾಕರಿಸಲು, ಸೆಲ್ಫಿ ತೆಗೆಯಲು, ನೋಟಿಫಿಕೇಷನ್‌ ಓದಲು ಹಾಗೂ ಮ್ಯೂಸಿಕ್‌ ಅನ್ನು ಫಾರ್ವರ್ಡ್‌ ಅಥವಾ ಬ್ಯಾಕ್ವರ್ಡ್‌ ಮಾಡುವ ವಿಶಿಷ್ಟ ಆಯ್ಕೆಗಳನ್ನು ಒಳಗೊಂಡಿದೆ.

‘ಕೈಯನ್ನು ಬಲಕ್ಕೆ ತಿರುಗಿಸಿದರೆ ಹಾಡು ಫಾರ್ವರ್ಡ್‌ ಆಗುತ್ತದೆ. ಎಡಕ್ಕೆ ತಿರುಗಿಸಿದರೆ ಬ್ಯಾಕ್ವರ್ಡ್‌ ಆಗುತ್ತದೆ. ಇದಲ್ಲದೆ, 24 ಗಂಟೆಯವರೆಗೆ ನಿದ್ರೆ ಯ ಮೇಲೆ ನಿಗಾ ಇರಿಸುವ, ಕ್ಯಾಲೆಂಡರ್‌ ಅಲರ್ಟ್ಸ್ ನೀಡುವ ಆಯ್ಕೆಗಳೂ ಇದರಲ್ಲಿವೆ. ಇದರ ಬ್ಯಾಟರಿ ಐದು ದಿನಗಳವರೆಗೆ ಬಾಳಿಕೆ ಬರುತ್ತದೆ’ ಎಂದು ಟೈಟಾನ್‌ ಕಂಪನಿಯ ಸಿಇಒ ಎಸ್‌. ರವಿಕಾಂತ್‌ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.