ADVERTISEMENT

2.66 ಕೋಟಿ ಟನ್‌ ಗೋಧಿ ಸಂಗ್ರಹ

ಪಿಟಿಐ
Published 3 ಜುಲೈ 2024, 16:23 IST
Last Updated 3 ಜುಲೈ 2024, 16:23 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಭಾರತೀಯ ಆಹಾರ ನಿಗಮವು (ಎಫ್‌ಸಿಐ) 2024–25ರ ಹಿಂಗಾರು ಹಂಗಾಮು ಅವಧಿಯಲ್ಲಿ 2.66 ಕೋಟಿ ಟನ್‌ ಗೋಧಿಯನ್ನು ಸಂಗ್ರಹಿಸಿದೆ. 

ಹಿಂದಿನ ವರ್ಷದ ಇದೇ ಅವಧಿಯಲ್ಲಿ 2.62 ಕೋಟಿ ಟನ್‌ ಸಂಗ್ರಹಿಸಲಾಗಿತ್ತು ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ.

ADVERTISEMENT

ಈ ವರ್ಷ ಸಾಮಾನ್ಯಕ್ಕಿಂತ ಮುಂಚೆಯೇ ಪ್ರಾರಂಭವಾದ ಸಂಗ್ರಹಣೆಯು 22 ಲಕ್ಷಕ್ಕೂ ಹೆಚ್ಚು ರೈತರಿಗೆ ಪ್ರಯೋಜನ ನೀಡಿದೆ. ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) ಸುಮಾರು ₹61 ಲಕ್ಷ ಕೋಟಿಯನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಲ್ಲಿ ಸ್ವೀಕರಿಸಿದ್ದಾರೆ ಎಂದು ತಿಳಿಸಿದೆ.

ಪ್ರಸಕ್ತ ಹಂಗಾಮಿಗೆ (ಏಪ್ರಿಲ್-ಮಾರ್ಚ್) ಸರ್ಕಾರವು ಪ್ರತಿ ಕ್ವಿಂಟಲ್‌ ಗೋಧಿಗೆ ₹2,275 ಬೆಂಬಲ ಬೆಲೆ ನಿಗದಿಪಡಿಸಿತ್ತು.

ಉತ್ತರ ಪ್ರದೇಶ ಮತ್ತು ರಾಜಸ್ಥಾನದಂತಹ ರಾಜ್ಯಗಳು ಗೋಧಿ ಸಂಗ್ರಹಣೆಯಲ್ಲಿ ಗಮನಾರ್ಹ ಸುಧಾರಣೆಗಳನ್ನು ತೋರಿಸಿವೆ.

ಉತ್ತರ ಪ್ರದೇಶವು ಕಳೆದ ವರ್ಷ 2.20 ಲಕ್ಷ ಟನ್‌ ಗೋಧಿ ಸಂಗ್ರಹಿಸಿತ್ತು. ಅದು ಪ್ರಸಕ್ತ ಅವಧಿಯಲ್ಲಿ 9.31 ಲಕ್ಷ ಟನ್‌ಗೆ ಏರಿಕೆಯಾಗಿದೆ. ರಾಜಸ್ಥಾನದ ಗೋಧಿ ಸಂಗ್ರಹವು 4.38 ಲಕ್ಷ ಟನ್‌ನಿಂದ 12 ಲಕ್ಷ ಟನ್‌ಗೆ ಏರಿಕೆಯಾಗಿದೆ.

ಗೋಧಿಯ ಜೊತೆಗೆ, 2023-24 ಮುಂಗಾರು ಹಂಗಾಮು ಅವಧಿಯಲ್ಲಿ ಭತ್ತದ ಸಂಗ್ರಹಣೆಯು 7.75 ಕೋಟಿ ಟನ್‌ ಆಗಿದೆ. 1 ಕೋಟಿಗೂ ಅಧಿಕ ರೈತರಿಗೆ ₹1.74 ಲಕ್ಷ ಕೋಟಿ ಪಾವತಿ ಮಾಡಲಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.