ಲಂಡನ್: ಬ್ರಿಟನ್ನಿಗೆ ಭಾರತದಿಂದ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ತರುವ ರಾಜ್ಯಗಳ ಸಾಲಿನಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ಕರ್ನಾಟಕ ಎರಡನೆಯ ಸ್ಥಾನದಲ್ಲಿದೆ. ದೆಹಲಿ ಮೂರನೆಯ ಸ್ಥಾನಪಡೆದಿದೆ.
ಭಾರತೀಯ ಕೈಗಾರಿಕಾ ಮಹಾಸಂಘ (ಸಿಐಐ) ಹಾಗೂ ಬ್ರಿಟನ್ನಿನಲ್ಲಿ ಇರುವ ಭಾರತೀಯ ಹೈಕಮಿಷನ್ ಜಂಟಿಯಾಗಿ ಸಿದ್ಧಪಡಿಸಿರುವ ವರದಿಯಲ್ಲಿ ಈ ಮಾಹಿತಿ ಇದೆ. ವರದಿಯನ್ನು ಲಂಡನ್ನಿನಲ್ಲಿ ಈಚೆಗೆ ಬಿಡುಗಡೆ ಮಾಡಲಾಗಿದೆ.
ಭಾರತದಿಂದ ಬ್ರಿಟನ್ನಿಗೆ ಎಫ್‌ಡಿಐ ತರುವ ಟಾಪ್–10 ರಾಜ್ಯಗಳ ಹೆಸರನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮಹಾರಾಷ್ಟ್ರದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಕಂಪನಿಗಳು ಭಾರತದಿಂದ ಬ್ರಿಟನ್ನಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಎಫ್‌ಡಿಐ ತಂದಿವೆ. ಇದು 2023ರಲ್ಲಿ ಭಾರತದಿಂದ ಬ್ರಿಟನ್ ಕಡೆ ಹರಿದ ಎಫ್‌ಡಿಐ ಮೊತ್ತದ ಶೇಕಡ 20ರಷ್ಟು.
ಕರ್ನಾಟಕದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಕಂಪನಿಗಳಿಂದ ಬಂದ ಎಫ್‌ಡಿಐ ಪ್ರಮಾಣ
ಶೇ 12ರಷ್ಟಿದೆ. ದೆಹಲಿಯ ಪಾಲು ಶೇ 8.6ರಷ್ಟು.
ಗುಜರಾತ್ (ಶೇ 7.1ರಷ್ಟು), ತಮಿಳುನಾಡು(ಶೇ 6.7), ತೆಲಂಗಾಣ (ಶೇ 6.5), ಉತ್ತರ ಪ್ರದೇಶ(ಶೇ 5.9), ಹರಿಯಾಣ (ಶೇ 4.5) ಪಶ್ಚಿಮ ಬಂಗಾಳ (ಶೇ 3.14), ಕೇರಳ (ಶೇ 3.05) ನಂತರದ ಸ್ಥಾನಗಳಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.