ADVERTISEMENT

ರೈತರ ಖಾತೆಗೆ ರಸಗೊಬ್ಬರ ಸಬ್ಸಿಡಿ ವ್ಯವಸ್ಥೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 18:52 IST
Last Updated 10 ಜುಲೈ 2019, 18:52 IST
ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಮನ್ಸುಖ್‌ ಎಲ್‌. ಮಾಂಡವಿಯಾ, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಮತ್ತು ಕಾರ್ಯದರ್ಶಿ ಛಬಿಲೇಂದ್ರ ರೌಲ್‌ ಅವರು ರಸಗೊಬ್ಬರ ಸಬ್ಸಿಡಿಯನ್ನು ವಿತರಿಸುವ ಎರಡನೇ ಹಂತದ ಡಿಬಿಟಿಗೆ ಚಾಲನೆ ನೀಡಿದರು -ಪಿಟಿಐ ಚಿತ್ರ

ನವದೆಹಲಿ: ರಸಗೊಬ್ಬರ ಸಬ್ಸಿಡಿಯನ್ನು ರೈತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ವರ್ಗಾಯಿಸಲು (ಡಿಬಿಟಿ) ಅನುಕೂಲ ಆಗುವಂತಹ ವ್ಯವಸ್ಥೆಗೆ ಬುಧವಾರ ಚಾಲನೆ ನೀಡಲಾಯಿತು.

2017ರ ಅಕ್ಟೋಬರ್‌ನಲ್ಲಿ ಮೊದಲ ಹಂತದಲ್ಲಿ ಸಬ್ಸಿಡಿ ಮೊತ್ತವನ್ನು ಕಂಪನಿಗಳಿಗೆ ವರ್ಗಾಯಿಸಲಾಗುತ್ತಿತ್ತು. ಎರಡನೇ ಹಂತದಲ್ಲಿ, ಸಬ್ಸಿಡಿ ಮೊತ್ತ ರೈತರ ಖಾತೆಗಳಿಗೆ ವರ್ಗಾವಣೆಯಾಗಲಿದೆ.

ಹೊಸ ತಂತ್ರಜ್ಞಾನ:ದೇಶ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿರಸಗೊಬ್ಬರ ಪೂರೈಕೆ ಮತ್ತು ಲಭ್ಯತೆಯ ಮಾಹಿತಿ ನೀಡಲು ಡ್ಯಾಷ್‌ಬೋರ್ಡ್‌ ಬಿಡುಗಡೆ ಮಾಡಲಾಗಿದೆ. ಸುಧಾರಿತ ಪಾಯಿಂಟ್‌ ಆಫ್ ಸೇಲ್‌ (ಪಿಒಎಸ್‌) ಸಾಫ್ಟ್‌ವೇರ್‌ ಮತ್ತು ಡೆಸ್ಕ್‌ಟಾಪ್‌ ಪಿಒಎಸ್‌ ವರ್ಷನ್‌ ಅಭಿವೃದ್ಧಿಪಡಿಸಲಾಗಿದೆ.

ADVERTISEMENT

‘ಡಿಬಿಟಿಯಿಂದ ರಸಗೊಬ್ಬರ ವಲಯದಲ್ಲಿ ಪಾರದರ್ಶಕತೆ ಮೂಡಲಿದೆ’ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.