ನವದೆಹಲಿ: ಈ ಬಾರಿಯ ಹಬ್ಬದ ಮಾರಾಟದಲ್ಲಿ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಮಧ್ಯೆ ತೀವ್ರ ಪೈಪೋಟಿ ನಡೆಯುತ್ತಿದೆ. ಎರಡೂ
ಇ–ಕಾಮರ್ಸ್ ಕಂಪನಿಗಳು ಅತಿ ಹೆಚ್ಚಿನ ಮಾರಾಟ ನಡೆಸುವುದಾಗಿ ಹೇಳಿಕೊಳ್ಳುತ್ತಿವೆ.
ಅಮೆಜಾನ್, ಭಾರತದ ಗ್ರಾಹಕರಿಗೆ ಅಷ್ಟಾಗಿ ಪ್ರಸ್ತುತತೆ ಕಾಯ್ದುಕೊಂಡಿಲ್ಲ ಎಂದು ಫ್ಲಿಪ್‌ಕಾರ್ಟ್ ಹೇಳಿದೆ. ಆದರೆ, ದೇಶದಲ್ಲಿ ಅತಿ ಹೆಚ್ಚು ಬಾರಿ ಭೇಟಿ ನೀಡಿದ ಮತ್ತು ವಹಿವಾಟು ನಡೆಸಿದ ಇ–ಕಾಮರ್ಸ್ ತಾಣವಾಗಿರುವುದಾಗಿ ಅಮೆಜಾನ್ ಹೇಳಿಕೊಳ್ಳುತ್ತಿದೆ.
ಮೂರು ದಿನಗಳಿಗಿಂತಲೂ ಕಡಿಮೆ ಅವಧಿಯಲ್ಲಿಸ್ಮಾರ್ಟ್‌ಫೋನ್, ಗೃಹ ಉತ್ಪನ್ನಗಳು, ಸಿದ್ಧ ಉಡುಪಿನ ವಿಭಾಗದಲ್ಲಿ ದಾಖಲೆ ಮಟ್ಟದ ಮಾರಾಟ ಸಾಧಿಸಿರುವುದಾಗಿ ಎರಡೂ ಕಂಪನಿಗಳು ತಿಳಿಸಿವೆ.
‘ಸಣ್ಣ ನಗರಗಳಲ್ಲಿಯೂ ಅಸ್ತಿತ್ವ ಕಾಯ್ದುಕೊಂಡಿದ್ದು, ಈ ಬಾರಿಯ ಬಿಗ್ ಬಿಲಿಯನ್ ಡೇಸ್’ನಲ್ಲಿ ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಮಾರಾಟದ ನಿರೀಕ್ಷೆ ಹೊಂದಿರುವುದಾಗಿ ಫ್ಲಿಪ್‌ಕಾರ್ಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಕಲ್ಯಾಣ್ ಕೃಷ್ಣಮೂರ್ತಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.