ಬೆಂಗಳೂರು: ಬ್ಯಾಂಕೇತರ ಹಣಕಾಸು ತಂತ್ರಜ್ಞಾನ ಸಂಸ್ಥೆಯಾಗಿರುವ ಬೆಂಗಳೂರಿನ ನಿಟ್‍ಸ್ಟೋನ್ ಫಿನ್‍ಸರ್ವ್, ಚಿನ್ನದ ಮೇಲಿನ ಸಾಲ ಸೌಲಭ್ಯಕ್ಕೆ ಚಾಲನೆ ನೀಡಿದೆ.
ತನ್ನ ರಿಟೇಲ್ ಸಾಲಗಳ ಉತ್ಪನ್ನಗಳಿಗೆ ಚಿನ್ನಾಭರಣ ಸಾಲವನ್ನು ಹೊಸದಾಗಿ ಸೇರ್ಪಡೆ ಮಾಡಿದೆ. ಈ ಚಿನ್ನದ ಸಾಲದ ಬಡ್ಡಿ ದರವು ಸ್ಪರ್ಧಾತ್ಮಕವಾಗಿರಲಿದೆ. ಚಿನ್ನದ ಮೌಲ್ಯಕ್ಕೆ ಗರಿಷ್ಠ ಪ್ರಮಾಣದ ಸಾಲವನ್ನು ಒದಗಿಸುವ ಭರವಸೆ ನೀಡುತ್ತದೆ.
₹ 5 ಸಾವಿರದಿಂದ ₹ 2 ಲಕ್ಷವರೆಗಿನ ಚಿನ್ನದ ಮೇಲಿನ ಸಾಲವು 1 ರಿಂದ 12 ತಿಂಗಳ ಮರುಪಾವತಿ ಅವಧಿಯೊಂದಿಗೆ ಲಭ್ಯವಿರಲಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.