ನವದೆಹಲಿ (ಪಿಟಿಐ): ಐಡಿಬಿಐ ಬ್ಯಾಂಕ್ ಖಾಸಗೀಕರಣಕ್ಕೆ ಹಣಕಾಸಿನ ಬಿಡ್‌ಗಳನ್ನು ಮಾರ್ಚ್‌ಗೆ ಮೊದಲು ಆಹ್ವಾನಿಸುವ ಸಾಧ್ಯತೆ ಇದೆ. ಬ್ಯಾಂಕ್‌ನ ಮಾರಾಟ ಪ್ರಕ್ರಿಯೆಯು ಮುಂದಿನ ಹಣಕಾಸು ವರ್ಷದ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐಡಿಬಿಐ ಬ್ಯಾಂಕ್‌ನಲ್ಲಿನ ಶೇಕಡ 60.72ರಷ್ಟು ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಹಾಗೂ ಎಲ್‌ಐಸಿ ಹಿಂದಿನ ವಾರ ಪ್ರಾಥಮಿಕ ಬಿಡ್ ಆಹ್ವಾನಿಸಿವೆ.
ಖಾಸಗಿ ಬ್ಯಾಂಕ್, ವಿದೇಶಿ ಬ್ಯಾಂಕ್, ಆರ್‌ಬಿಐ ಅಡಿ ನೋಂದಾಯಿತ ಆಗಿರುವ ಬ್ಯಾಂಕೇತರ ಹಣಕಾಸು ಕಂಪನಿಗಳು, ಸೆಬಿ ನೋಂದಾಯಿತ ಪರ್ಯಾಯ ಹೂಡಿಕೆ ನಿಧಿಗಳು ಬಿಡ್ ಸಲ್ಲಿಸಲು ಅವಕಾಶ ಇರಲಿದೆ.
ಈಗ ಐಡಿಬಿಐ ಬ್ಯಾಂಕ್‌ನಲ್ಲಿ ಎಲ್‌ಐಸಿ ಶೇ 49.24ರಷ್ಟು ಷೇರು ಹೊಂದಿದೆ. ಕೇಂದ್ರ ಸರ್ಕಾರವು ಶೇ 45.48ರಷ್ಟು ಪಾಲು ಹೊಂದಿದೆ. ಇನ್ನುಳಿದ ಶೇ 5.2ರಷ್ಟು ಷೇರುಗಳು ಸಾರ್ವಜನಿಕರ ಬಳಿ ಇವೆ. ಖಾಸಗೀಕರಣದ ನಂತರದಲ್ಲಿ ಎಲ್‌ಐಸಿ ಹಾಗೂ ಕೇಂದ್ರದ ಜಂಟಿ ಪಾಲು ಈಗಿನ ಶೇ 94.72ರಿಂದ ಶೇ 34ಕ್ಕೆ ಇಳಿಕೆಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.