ADVERTISEMENT

ಸೈಬರ್‌ ಭದ್ರತೆ ಬಲಪಡಿಸಿ: ಬ್ಯಾಂಕ್‌ಗಳಿಗೆ ಸರ್ಕಾರ ಸೂಚನೆ

ಪಿಟಿಐ
Published 19 ನವೆಂಬರ್ 2023, 12:56 IST
Last Updated 19 ನವೆಂಬರ್ 2023, 12:56 IST
<div class="paragraphs"><p>ಸೈಬರ್‌ ದಾಳಿ ತಂತ್ರಾಂಶ (ಪ್ರಾತಿನಿಧಿಕ ಚಿತ್ರ)</p></div>

ಸೈಬರ್‌ ದಾಳಿ ತಂತ್ರಾಂಶ (ಪ್ರಾತಿನಿಧಿಕ ಚಿತ್ರ)

   

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ತಮ್ಮ ಡಿಜಿಟಲ್ ಕಾರ್ಯಾಚರಣೆಗೆ ಸಂಬಂಧಿಸಿದ ವ್ಯವಸ್ಥೆ ಮತ್ತು ಪ್ರಕ್ರಿಯೆಗಳನ್ನು ಪರಿಶೀಲಿಸುವಂತೆ ಹಣಕಾಸು ಸಚಿವಾಲಯವು ಸೂಚಿಸಿದೆ. ಯುಕೋ ಬ್ಯಾಂಕ್‌ನಲ್ಲಿ ಇತ್ತೀಚೆಗೆ ನಡೆದ ಘಟನೆಯಿಂದಾಗಿ ಸಚಿವಾಲಯ ಈ ಸೂಚನೆ ನೀಡಿದೆ.

ಬ್ಯಾಂಕ್‌ಗಳು ತಮ್ಮ ಸೈಬರ್‌ ಸುರಕ್ಷತೆಯ ದೃಢತೆಯನ್ನು ಪರಿಶೀಲಿಸಲು ಮತ್ತು ಅವುಗಳನ್ನು ಬಲಪಡಿಸಲು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದೆ. ಬ್ಯಾಂಕ್‌ಗಳು ಹೆಚ್ಚು ಜಾಗರೂಕತೆಯನ್ನು ಇಟ್ಟುಕೊಳ್ಳಬೇಕು ಮತ್ತು ಭವಿಷ್ಯದಲ್ಲಿ ಸಂಭವಿಸಬಹುದಾದ ಸೈಬರ್‌ ಬೆದರಿಕೆ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಪ್ರಕರಣವೇನು?: ಸಾರ್ವಜನಿಕ ವಲಯದ ಕೋಲ್ಕತ್ತದ ಯುಕೋ ಬ್ಯಾಂಕ್‌ ಕಳೆದ ವಾರ ₹820 ಕೋಟಿಯನ್ನು ಬ್ಯಾಂಕ್‌ನ ಖಾತೆದಾರರಿಗೆ ತಕ್ಷಣ ಪಾವತಿ ಸೇವೆ (ಐಎಂಪಿಎಸ್‌) ಮೂಲಕ ತಪ್ಪಾಗಿ ಹಾಕಿತ್ತು. ಈ ಹಣದ ಪೈಕಿ ₹649 ಕೋಟಿಯ ಪಾವತಿಗೆ ತಡೆ ಒಡ್ಡಲಾಗಿದೆ. ಉಳಿದ ಹಣ ಬರಬೇಕಿದೆ. ಇದು ಮಾನವ ದೋಷ ಅಥವಾ ಹ್ಯಾಕಿಂಗ್‌ನಿಂದ ಉಂಟಾಗಿದೆಯೇ ಎಂದು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಇನ್ನೂ ಸ್ಪಷ್ಟಪಡಿಸಿಲ್ಲ. ಅಗತ್ಯ ಕ್ರಮಕ್ಕಾಗಿ ಬ್ಯಾಂಕ್ ಕಾನೂನು ಜಾರಿ ಸಂಸ್ಥೆಗಳಿಗೆ ವಿಷಯವನ್ನು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.