ನವದೆಹಲಿ: ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು ಜೂನ್ ತ್ರೈಮಾಸಿಕದ ಅಂತ್ಯಕ್ಕೆ ಇಡೀ ವರ್ಷದ ಗುರಿಯ ಶೇಕಡ 25.3ರಷ್ಟು ಆಗಿದೆ. ಕೇಂದ್ರ ಸರ್ಕಾರವು ಈ ಕುರಿತ ಮಾಹಿತಿಯನ್ನು ಸೋಮವಾರ ಬಿಡುಗಡೆ ಮಾಡಿದೆ.
ಸರ್ಕಾರದ ವರಮಾನ ಹಾಗೂ ವೆಚ್ಚದ ನಡುವಿನ ಅಂತರವಾಗಿರುವ ವಿತ್ತೀಯ ಕೊರತೆಯು ಜೂನ್ ತ್ರೈಮಾಸಿಕದ ಅಂತ್ಯಕ್ಕೆ ₹4.51 ಲಕ್ಷ ಕೋಟಿ ಆಗಿದೆ. ಹಿಂದಿನ ವರ್ಷದ ಜೂನ್ ತ್ರೈಮಾಸಿಕದ ಕೊನೆಯಲ್ಲಿ ವಿತ್ತೀಯ ಕೊರತೆಯು ಇಡೀ ವರ್ಷದ ಗುರಿಯ ಶೇ 21.2ರಷ್ಟು ಆಗಿತ್ತು.
2023–24ನೆಯ ಆರ್ಥಿಕ ವರ್ಷದಲ್ಲಿ ವಿತ್ತೀಯ ಕೊರತೆಯನ್ನು ಒಟ್ಟು ಜಿಡಿಪಿಯ ಶೇ 5.9ಕ್ಕೆ ತಗ್ಗಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.