ನವದೆಹಲಿ: ಪ್ರಮುಖ 10 ಕಂಪನಿಗಳ ಪೈಕಿ ಐದು ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯವು (ಎಂ–ಕ್ಯಾಪ್) ಕಳೆದ ವಾರ ₹1.97 ಲಕ್ಷ ಕೋಟಿ ಇಳಿಕೆಯಾಗಿದೆ.
ಟಿಸಿಎಸ್ ಮತ್ತು ಇನ್ಫೊಸಿಸ್ ಹೆಚ್ಚು ಇಳಿಕೆ ಕಂಡ ಕಂಪನಿಗಳಾಗಿವೆ.
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ₹1.10 ಲಕ್ಷ ಕೋಟಿ, ಇನ್ಫೊಸಿಸ್ ₹52,291 ಕೋಟಿ, ಹಿಂದೂಸ್ತಾನ್ ಯೂನಿಲಿವರ್ ₹16,834 ಕೋಟಿ, ಎಲ್‌ಐಸಿ ₹11,701 ಕೋಟಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನ ₹6,996 ಕೋಟಿ ಮಾರುಕಟ್ಟೆ ಮೌಲ್ಯ ಇಳಿಕೆಯಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ₹49,152 ಕೋಟಿ, ಎಸ್‌ಬಿಐ ₹12,851 ಕೋಟಿ, ಐಟಿಸಿ ₹11,108 ಕೋಟಿ, ಭಾರ್ತಿ ಏರ್‌ಟೆಲ್ ₹9,430 ಕೋಟಿ ಮತ್ತು ಐಸಿಐಸಿಐ ಬ್ಯಾಂಕ್‌ನ ಎಂ–ಕ್ಯಾಪ್‌ಗೆ ₹8,191 ಕೋಟಿ ಸೇರ್ಪಡೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.