ಬೆಂಗಳೂರು: ಲಾಜಿಸ್ಟಿಕ್ ಉದ್ಯಮದ ಕೌಶಲ ಕೊರತೆ ನಿವಾರಿಸಲುಫ್ಲಿಪ್‌ಕಾರ್ಟ್ ಸಂಸ್ಥೆಯು ಕರ್ನಾಟಕ ಕೌಶಲ ಅಭಿವೃದ್ಧಿ ಮಂಡಳಿ (ಕೆಎಸ್‌ಡಿಸಿ) ಮೂಲಕ ಸ್ಥಾಪಿಸಿರುವಲಾಜಿಸ್ಟಿಕ್ಸ್ಕೌಶಲ ವಲಯ ಕೇಂದ್ರದೊಂದಿಗೆ (ಎಸ್‌ಎಲ್‌ಸಿ) ಒಪ್ಪಂದ ಮಾಡಿಕೊಂಡಿದೆ.
ಇದರ ಭಾಗವಾಗಿಇ-ಕಾಮರ್ಸ್ ಉದ್ಯಮಕ್ಕಾಗಿ ನುರಿತ ಮತ್ತು ತರಬೇತಿ ಪಡೆದ ಕಾರ್ಯಪಡೆಯೊಂದನ್ನು ನಿರ್ಮಿಸಲು ಫ್ಲಿಪ್‌ಕಾರ್ಟ್ ‘ಉತ್ಕೃಷ್ಠತೆಯ ಕೇಂದ್ರ’ (ಸಿಒಇ) ಆರಂಭಿಸಿದೆ.ಇದು ಪದವಿ ಪೂರ್ವ ವಿದ್ಯಾಭ್ಯಾಸಕ್ಕೆ ಸಮಾನವಾಗಿರಲಿದೆ.
ಲಾಜಿಸ್ಟಿಕ್ಸ್ಉದ್ಯಮದಲ್ಲಿಕೆಲಸ ಮಾಡಲು ಬಯಸುವ ಆಕಾಂಕ್ಷಿಗಳಿಗೆ ಈ ಕೇಂದ್ರ ಮುಕ್ತವಾಗಿದೆ. ನಗರದಲ್ಲಿ ಇ–ಕಾಮರ್ಸ್ ಪೂರೈಕೆ ಸರಪಳಿ, ಅಭ್ಯರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ತರಬೇತಿ ನೀಡಲಾಗುವುದು.
ತರಬೇತಿ ಪಡೆಯುವ ಆಯ್ದ ಅಭ್ಯರ್ಥಿಗಳು ಫ್ಲಿಪ್‌ಕಾರ್ಟ್‌ನೊಂದಿಗೆಅಪ್ರೆಂಟಿಸ್‌ಶಿಪ್ಕಾರ್ಯಕ್ರಮಕ್ಕೆಸೇರಲುಅವಕಾಶ ಪಡೆಯಲಿದ್ದಾರೆ.60ದಿನಗಳತರಬೇತಿ ಇ-ಕಾಮರ್ಸ್ಕ್ಷೇತ್ರದಲ್ಲಿ ಉದ್ಯೋಗಾವಕಾಶವನ್ನುಹೆಚ್ಚಿಸಲಿದೆ.
ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ರಾಷ್ಟ್ರೀಯ ಕೌಶಲ ಅರ್ಹತಾ ಫ್ರೇಂವರ್ಕ್‌ನಡಿ(ಎನ್‌ಎಸ್‌ಎಫ್‌ಕ್ಯೂ) ಪ್ರಮಾಣ ಪತ್ರ ಪಡೆಯಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.