ನವದೆಹಲಿ: ದೇಶದ ಪ್ರಮುಖ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ವಾರ್ಷಿಕ ವಿಶೇಷ ಬಿಗ್ ಬಿಲಿಯನ್ ಡೇ ಸೇಲ್ ನಡೆಯುತ್ತಿದೆ. ಆಫರ್ ಮಾರಾಟದ ಮೊದಲ ದಿನ ಸೆ. 22ರಂದು ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರಿಗೆ ಸೇಲ್ ಆರಂಭವಾಗಿತ್ತು.
ಆ ಸಂದರ್ಭದಲ್ಲಿ ಫ್ಲಿಪ್‌ಕಾರ್ಟ್ ಆ್ಯಪ್ ಮೂಲಕ ಪ್ರತಿ ಸೆಕೆಂಡ್‌ಗೆ 16 ಲಕ್ಷದಂತೆ ಗ್ರಾಹಕರು ಇ ಕಾಮರ್ಸ್ ತಾಣಕ್ಕೆ ಭೇಟಿ ನೀಡಿದ್ದಾರೆ.
ಫ್ಲಿಪ್‌ಕಾರ್ಟ್ ಮಾತ್ರವಲ್ಲದೆ, ಅಮೆಜಾನ್, ಮೀಶೊ ಮತ್ತು ಸ್ನ್ಯಾಪ್‌ಡೀಲ್ ವಾರ್ಷಿಕ ವಿಶೇಷ ಆಫರ್ ಮಾರಾಟವನ್ನು ಆರಂಭಿಸಿವೆ.
ಫ್ಲಿಪ್‌ಕಾರ್ಟ್ ಕಂಪನಿಯು ಈ ಬಾರಿಯ ಬಿಗ್ ಬಿಲಿಯನ್ ಡೇ ಆಫರ್ ಸೇಲ್‌ನ ಒಟ್ಟು ಮಾರಾಟ ಮತ್ತು ಇತರ ವಿವರಗಳನ್ನು ಬಹಿರಂಗಪಡಿಸಿಲ್ಲ.
ಸೇಲ್ ಆರಂಭದ ದಿನಗಳಲ್ಲಿ ಫ್ಲಿಪ್‌ಕಾರ್ಟ್ ತಾಣಕ್ಕೆ ಗರಿಷ್ಠ ಸಂಖ್ಯೆಯ ಜನರು ಭೇಟಿ ನೀಡಿದ್ದಾರೆ. ಸ್ಮಾರ್ಟ್‌ಫೋನ್, ಗೃಹಬಳಕೆಯ ಎಲೆಕ್ಟ್ರಾನಿಕ್ಸ್ ಉತ್ಪನ್ನ, ಫ್ಯಾಶನ್, ಪೀಠೋಪಕರಣ ವಿಭಾಗದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ಮಾರಾಟ ಕಂಡುಬಂದಿದೆ ಎಂದು ಕಂಪನಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.