ADVERTISEMENT

ಫ್ಲಿಪ್ ಕಾರ್ಟ್ ಹೆಲ್ತ್+ನಿಂದ ‘ಮಧುಮೇಹ ಮುಕ್ತ ದಿನಗಳು’ ಅಭಿಯಾನ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2022, 13:01 IST
Last Updated 13 ನವೆಂಬರ್ 2022, 13:01 IST
   

ಬೆಂಗಳೂರು: ಫ್ಲಿಪ್‌ಕಾರ್ಟ್ ಸಮೂಹದ ಫ್ಲಿಪ್‌ಕಾರ್ಟ್ ಹೆಲ್ತ್+ ಕಂಪನಿಯು ಇದೇ ಮೊದಲ ಬಾರಿಗೆ ಡಿಜಿಟಲ್ ಹೆಲ್ತ್ ಕೇರ್ ಕ್ಷೇತ್ರದಲ್ಲಿ ‘ಮಧುಮೇಹ ಮುಕ್ತ ದಿನಗಳು’ ಎಂಬ ಅತಿ ದೊಡ್ಡ ಡಯಾಬಿಟಿಸ್ ಕೇರ್ ಉಪಕ್ರಮವನ್ನು ಆರಂಭಿಸಿರುವುದಾಗಿ ಹೇಳಿದೆ.

ಈ ಉಪಕ್ರಮವು ಇದೇ 16ರವರೆಗೆ ನಡೆಯಲಿದ್ದು, ದೇಶಾದ್ಯಂತ 2 ಮತ್ತು 3 ನೇ ಶ್ರೇಣಿಯ ನಗರಗಳ ಗ್ರಾಹಕರು ಹೆಚ್ಚುವರಿ ಪ್ರಯೋಜನಗಳೊಂದಿಗೆ ಔಷಧಿಗಳು ಮತ್ತು ಆರೋಗ್ಯ ರಕ್ಷಣೆ ಉತ್ಪನ್ನಗಳ ಮೇಲೆ ಅತ್ಯುತ್ತಮ ಕೊಡುಗೆಗಳನ್ನು ಪಡೆಯಲಿದ್ದಾರೆ. ಮೆಟ್ರೊಪೊಲೀಸ್‌ ಹೆಲ್ತ್‌ ಕೇರ್‌ ಲಿಮಿಟೆಡ್‌ ಸಹಭಾಗಿತ್ವದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ.

ನವೆಂಬರ್‌ 16ರವರೆಗೆ ಶಾಪಿಂಗ್‌ ಮಾಡುವ ಗ್ರಾಹಕರಿಗೆ ಉಚಿತವಾಗಿ ಮಧುಮೇಹ ಪರೀಕ್ಷೆ ನಡೆಸಲಾಗುತ್ತದೆ. ಗ್ರಾಹಕರು ಉಚಿತ ಗ್ಲೂಕೊಮೀಟರ್ ಪಡೆಯಬಹುದಾಗಿದೆ ಎಂದು ಹೇಳಿದೆ.

ADVERTISEMENT

‘ಭಾರತದಲ್ಲಿ ಮಧುಮೇಹದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಂಪನಿಯು ಇಟ್ಟಿದೆ. ಕೈಗೆಟುಕುವ ದರದಲ್ಲಿ ಆರೋಗ್ಯ ಆಧಾರಿತ ಮತ್ತು ನವೀನ ಮಾದರಿಯ ಪರಿಹಾರಗಳನ್ನು ನೀಡುವ ಮೂಲಕ ಭಾರತೀಯರ ಆರೋಗ್ಯ ಸುಧಾರಣೆ ಮಾಡಲು ನಿರಂತರವಾದ ಪ್ರಯತ್ನ ನಡೆಸಿದ್ದೇವೆ. ಈ ಬಾರಿಯ ವಿಶ್ವ ಮಧುಮೇಹದ ದಿನದ ಅಂಗವಾಗಿ ಫ್ಲಿಪ್ ಕಾರ್ಟ್ ಹೆಲ್ತ್+ ದುಬಾರಿ ಆರೋಗ್ಯ ವೆಚ್ಚಗಳನ್ನು ಕಡಿಮೆ ಮಾಡುವುದು ಮತ್ತು ರೋಗಿಗಳಿಗೆ ಹಾಗೂ ಆರೈಕೆ ಮಾಡುವವರಿಗೆ ಉತ್ತಮ ಮೌಲ್ಯದ ಸೇವೆಗಳನ್ನು ಒದಗಿಸುವ ಮೂಲಕ ಅವರ ಜೀವನದ ಗುಣಮಟ್ಟ ಸುಧಾರಿಸಲು ಕಂಪನಿಯು ತನ್ನ ಪ್ರಯತ್ನವನ್ನು ಮುಂದುವರಿಸಿದೆ’ ಎಂದು ಫ್ಲಿಪ್ ಕಾರ್ಟ್ ಹೆಲ್ತ್+ನ ಸಿಇಒ ಪ್ರಶಾಂತ್ ಝಾವೇರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.