ಬೆಂಗಳೂರು: ಫ್ಲಿಪ್‌ಕಾರ್ಟ್ ಸಮರ್ಥ್‌ನ ಎರಡನೇ ಆವೃತ್ತಿಯ ‘ಕ್ರಾಫ್ಟೆಡ್ ಬೈ ಭಾರತ್’ ಹೆಸರಿನ ಮಾರಾಟ ಮೇಳಕ್ಕೆ ಶುಕ್ರವಾರ ಚಾಲನೆ ಸಿಗಲಿದೆ.
ವಿಶ್ವ ಕುಶಲಕರ್ಮಿಗಳ ದಿನದ ಅಂಗವಾಗಿ ಏಪ್ರಿಲ್ 15ರಂದು (ಶುಕ್ರವಾರ) ಮಾರಾಟ ಮೇಳಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಫ್ಲಿಪ್‌ಕಾರ್ಟ್‌ನೊಂದಿಗೆ ಸಹಭಾಗಿತ್ವ ಹೊಂದಿರುವ ದೇಶದ ಗ್ರಾಮೀಣ ಮತ್ತು ನಗರ ಪ್ರದೇಶಗಳ ಸ್ವ–ಸಹಾಯ ಗುಂಪುಗಳ ಮಹಿಳೆಯರು, ಕರಕುಶಲಕರ್ಮಿಗಳು, ನೇಕಾರರು ಸೇರಿದಂತೆ ಇನ್ನಿತರ ವರ್ಗದವರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಕುಶಲಕರ್ಮಿಗಳು, ನೇಕಾರರು ಮತ್ತು ಕರಕುಶಲ ಉತ್ಪನ್ನಗಳ ತಯಾರಕರು ಇ-ಕಾಮರ್ಸ್ ಕ್ಷೇತ್ರ ಪ್ರವೇಶಿಸಲು ‘ಫ್ಲಿಪ್‍ಕಾರ್ಟ್ ಸಮರ್ಥ್’ ರೂಪಿಸಲಾಗಿದೆ.
ಮಾರಾಟದ ಮೇಳದ ಎರಡನೇ ಆವೃತ್ತಿಯಲ್ಲಿ 1 ಲಕ್ಷಕ್ಕೂ ಅಧಿಕ ಉತ್ಪನ್ನಗಳು ಮತ್ತು 220ಕ್ಕೂ ಹೆಚ್ಚು ಕಲಾ ಮಾದರಿಗಳನ್ನು 40 ಕೋಟಿಗೂ ಅಧಿಕ ಗ್ರಾಹಕರನ್ನು ಫ್ಲಿಪ್‌ಕಾರ್ಟ್ ಮೂಲಕ ತಲುಪಲಿವೆ ಎಂದು ಕಂಪನಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.