ಉದಯಪುರ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕು. ಇದಕ್ಕಾಗಿ ಅಧಿಕಾರಿಗಳು ತೆರಿಗೆದಾರರ ಬಗ್ಗೆ ತಮ್ಮ ಮನೋಭಾವವನ್ನು ಸಕಾರಾತ್ಮಕವಾಗಿ ಇರಿಸಿಕೊಳ್ಳಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಉದಯಪುರದ ಹಿರಾನ್ ಮ್ಯಾಗ್ರಿಯಲ್ಲಿ ಹೊಸದಾಗಿ ನಿರ್ಮಿಸಲಾದ ಜಿಎಸ್‌ಟಿ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, 2019ರಿಂದ ಜಿಎಸ್‌ಟಿ ಕಚೇರಿಗಳನ್ನು ಅನುಕೂಲಕರವಾಗಿ ಮಾಡಲಾಗುತ್ತಿದೆ. ಇದರಿಂದ ತೆರಿಗೆದಾರರು ತಮ್ಮ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಲು ಸಹಾಯ ಮಾಡುತ್ತಿದೆ. ಇದು ವ್ಯವಹಾರವನ್ನು ಉತ್ತೇಜಿಸುತ್ತದೆ ಎಂದರು.
ಜಿಎಸ್‌ಟಿ ಮಂಡಳಿಯಲ್ಲೂ ಅಧಿಕಾರಿಗಳು ಮತ್ತು ಸಚಿವರು ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸುತ್ತಿದ್ದಾರೆ. ತೆರಿಗೆದಾರರ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಬೇಕು ಮತ್ತು ಅನುಮಾನಗಳು ಸಮಸ್ಯೆಗಳಾಗಿ ಬದಲಾಗಬಾರದು ಎಂದು ಹೇಳಿದರು.
Cut-off box -
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.