ADVERTISEMENT

ಕೋವಿಡ್ ‍ಪೂರ್ವದ ಮಟ್ಟಕ್ಕೆ ಇಳಿದ ವಿದೇಶಿ ಬಂಡವಾಳ

ಪಿಟಿಐ
Published 8 ಮೇ 2022, 15:43 IST
Last Updated 8 ಮೇ 2022, 15:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ರಾಷ್ಟ್ರೀಯ ಷೇರುಪೇಟೆಯ ಟಾಪ್‌–500 ಕಂಪನಿಗಳಲ್ಲಿ ವಿದೇಶಿ ಹೂಡಿಕೆದಾರರ ಪಾಲು ಕೋವಿಡ್‌ಗೂ ಹಿಂದಿನ ಮಟ್ಟಕ್ಕೆ ಇಳಿಕೆಯಾಗಿದೆ. ವಿದೇಶಿ ಹೂಡಿಕೆದಾರರು ಈ ವರ್ಷದ ಮಾರ್ಚ್‌ನಲ್ಲಿ ಈ ಕಂಪನಿಗಳಲ್ಲಿ ಒಟ್ಟು ಶೇಕಡ 19.5ರಷ್ಟು ಪಾಲು ಹೊಂದಿದ್ದರು.

2019ರ ಮಾರ್ಚ್‌ನಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರು ಎನ್‌ಎಸ್‌ಇ–500 ಕಂಪನಿಗಳಲ್ಲಿ ಶೇಕಡ 19.3ರಷ್ಟು ಪಾಲು ಹೊಂದಿದ್ದರು ಎಂದು ಬ್ಯಾಂಕ್ ಆಫ್ ಅಮೆರಿಕಾ ಸೆಕ್ಯುರಿಟೀಸ್‌ ಹೇಳಿದೆ.

2017ರ ಡಿಸೆಂಬರ್‌ನಲ್ಲಿ ದೇಶದ ಬಂಡವಾಳ ಮಾರುಕಟ್ಟೆಯ ಷೇರುಗಳಲ್ಲಿ ವಿದೇಶಿ ಹೂಡಿಕೆದಾರರು ಶೇಕಡ 18.6ರಷ್ಟು ಪಾಲು ಹೊಂದಿದ್ದರು. ಇದು ಐದು ವರ್ಷಗಳ ಕನಿಷ್ಠ ಮಟ್ಟವಾಗಿತ್ತು. 2021ರ ಡಿಸೆಂಬರ್‌ನಲ್ಲಿ ಅವರು ಶೇ 21.4ರಷ್ಟು ಪಾಲು ಹೊಂದಿದ್ದು, ಐದು ವರ್ಷಗಳ ಗರಿಷ್ಠ ಮಟ್ಟ.

ADVERTISEMENT

ವಿದೇಶಿ ಹೂಡಿಕೆದಾರರು ಬಂಡವಾಳ ಹಿಂತೆಗೆದುಕೊಂಡ ಕಾರಣದಿಂದ ಆದ ನಷ್ಟವನ್ನು ದೇಶಿ ಹೂಡಿಕೆದಾರರು ಸರಿದೂಗಿಸಿದ್ದಾರೆ. ದೇಶಿ ಹೂಡಿಕೆದಾರರು ಮಾರ್ಚ್‌ನಲ್ಲಿ ₹ 46 ಸಾವಿರ ಕೋಟಿ ಹೂಡಿಕೆ ಮಾಡಿದ್ದಾರೆ. 2021–22ನೆಯ ಹಣಕಾಸು ವರ್ಷದಲ್ಲಿ ₹ 1.12 ಲಕ್ಷ ಕೋಟಿ ಹಣ ತೊಡಗಿಸಿದ್ದಾರೆ ಎಂದು ವರದಿ ಹೇಳಿದೆ.

ವಿದೇಶಿ ಬಂಡವಾಳ ಹೂಡಿಕೆದಾರರು ಹೆಚ್ಚಿನ ಪಾಲನ್ನು ಇಂಧನ, ಮಾಹಿತಿ ತಂತ್ರಜ್ಞಾನ, ಸಂವಹನ ಸೇವೆ ವಲಯದ ಷೇರುಗಳಲ್ಲಿ ತೊಡಗಿಸಿದ್ದಾರೆ.

ವಿದೇಶಿ ಹೂಡಿಕೆದಾರರು ಭಾರತದಿಂದ ಬಂಡವಾಳ ಹಿಂದಕ್ಕೆ ಪಡೆಯುವುದು ನಿರಂತರವಾಗಿ ನಡೆಯುತ್ತಿದ್ದರೂ, ಅವರು ತಮ್ಮ ಒಟ್ಟು ಬಂಡವಾಳದಲ್ಲಿ ಭಾರತದಲ್ಲಿ ಹೂಡಿಕೆ ಮಾಡಲು ಮೀಸಲಿಡುವ ಪ್ರಮಾಣ ಏರಿಕೆ ಕಂಡಿದೆ. ಇದು 2021ರ ಜನವರಿಯಲ್ಲಿ ಶೇ 13.3ರಷ್ಟು ಇದ್ದಿದ್ದು, ಈ ವರ್ಷದ ಮಾರ್ಚ್‌ನಲ್ಲಿ ಶೇ 19ಕ್ಕೆ ಹೆಚ್ಚಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.