ADVERTISEMENT

ವಿದೇಶಿ ವಿನಿಮಯ ಸಂಗ್ರಹ ಏರಿಕೆ

ಪಿಟಿಐ
Published 6 ಸೆಪ್ಟೆಂಬರ್ 2024, 15:35 IST
Last Updated 6 ಸೆಪ್ಟೆಂಬರ್ 2024, 15:35 IST
Forex
Forex   

ಮುಂಬೈ: ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ಆಗಸ್ಟ್‌ಗೆ 30ಕ್ಕೆ ಕೊನೆಗೊಂಡ ವಾರದಲ್ಲಿ ₹19,300 ಕೋಟಿಯಷ್ಟು ಹೆಚ್ಚಳವಾಗಿದೆ.

ಒಟ್ಟು ಮೀಸಲು ಸಂಗ್ರಹವು ₹57.42 ಲಕ್ಷ ಕೋಟಿಗೆ ತಲುಪಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಶುಕ್ರವಾರ ತಿಳಿಸಿದೆ.

ವಿದೇಶಿ ಕರೆನ್ಸಿಗಳ ಸಂಗ್ರಹವು ₹12,466 ಕೋಟಿ ಹೆಚ್ಚಳವಾಗಿದ್ದು, ಒಟ್ಟು ಸಂಗ್ರಹ ಮೊತ್ತ ₹50.28 ಲಕ್ಷ ಕೋಟಿ ಆಗಿದೆ.

ADVERTISEMENT

ಚಿನ್ನದ ಮೀಸಲು ಸಂಗ್ರಹವು ₹7,236 ಕೋಟಿ ಏರಿಕೆಯಾಗಿದೆ. ಸ್ಪೆಷಲ್‌ ಡ್ರಾಯಿಂಗ್‌ ರೈಟ್ಸ್‌ (ಎಸ್‌ಡಿಆರ್‌) ಮೀಸಲು ₹75 ಕೋಟಿ ಏರಿಕೆಯಾಗಿ ₹1.55 ಲಕ್ಷ ಕೋಟಿಗೆ ತಲುಪಿದೆ.

ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿನ (ಐಎಂಎಫ್‌) ಭಾರತದ ಮೀಸಲು ಸಂಗ್ರಹವು ₹486 ಕೋಟಿ ಹೆಚ್ಚಳವಾಗಿದ್ದು, ಒಟ್ಟು ಸಂಗ್ರಹ ಮೊತ್ತ ₹38,801 ಕೋಟಿಗೆ ಮುಟ್ಟಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.