ADVERTISEMENT

ತೆಲಂಗಾಣದಲ್ಲಿ ಹೂಡಿಕೆಗೆ ಫಾಕ್ಸ್‌ಕಾನ್‌ ಉತ್ಸುಕ

ಪಿಟಿಐ
Published 16 ಆಗಸ್ಟ್ 2024, 14:34 IST
Last Updated 16 ಆಗಸ್ಟ್ 2024, 14:34 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಹೈದರಾಬಾದ್‌: ಐಫೋನ್‌ ತಯಾರಿಕಾ ಕಂಪನಿ ಫಾಕ್ಸ್‌ಕಾನ್‌ ಹೈದರಾಬಾದ್‌ನಲ್ಲಿ ಬಂಡವಾಳ ಹೂಡಿಕೆಗೆ ಉತ್ಸುಕವಾಗಿದೆ ಎಂದು ತೆಲಂಗಾಣ ಸರ್ಕಾರವು ಶುಕ್ರವಾರ ತಿಳಿಸಿದೆ.

ನವದೆಹಲಿಯಲ್ಲಿ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಅವರು, ಫಾಕ್ಸ್‌ಕಾನ್‌ ಮುಖ್ಯಸ್ಥ ಯಂಗ್‌ ಲಿಯು ಅವರನ್ನು ಭೇಟಿ ಮಾಡಿ ಹೈದರಾಬಾದ್‌ನ ಹೊರವಲಯದಲ್ಲಿ ಅಭಿವೃದ್ಧಿಪಡಿಸುತ್ತಿರುವ ಪೋರ್ಥ್‌ ಸಿಟಿಯಲ್ಲಿ ಬಂಡವಾಳ ಹೂಡಿಕೆಗೆ ಆಹ್ವಾನ ನೀಡಿದ್ದಾರೆ ಎಂದು ಹೇಳಿದೆ.

ಬಂಡವಾಳ ಹೂಡಿಕೆ ಮಾಡಿದರೆ ಅಗತ್ಯವಿರುವ ಪರವಾನಗಿ ಹಾಗೂ ಉತ್ಪಾದನೆ ಆಧಾರಿತ ಉತ್ತೇಜನ ಸೌಲಭ್ಯವನ್ನೂ ಕಲ್ಪಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ತಿಳಿಸಿದೆ.

ADVERTISEMENT

ತೆಲಂಗಾಣದ ಕೋರಿಕೆಗೆ ಯಂಗ್‌ ಲಿಯು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕೈಗಾರಿಕಾ ಮತ್ತು ಸೇವಾ ವಲಯದ ವಿಸ್ತರಣೆಯ ನಿಟ್ಟಿನಲ್ಲಿ ಹೈದರಾಬಾದ್‌ ಉತ್ತಮ ತಾಣವಾಗಿದೆ ಎಂಬುದನ್ನು ಫಾಕ್ಸ್‌ಕಾನ್‌ ಮುಖ್ಯಸ್ಥರು ಕೂಡ ಗಮನಿಸಿದ್ದಾರೆ ಎಂದು ಹೇಳಿದೆ. 

ಕಂಪನಿಯ ಮುಖ್ಯ ಕ್ಯಾಂಪಸ್‌ ಕಾರ್ಯಾಚರಣೆ ಅಧಿಕಾರಿ ಕ್ಯಾಥಿ ಯಾಂಗ್ ಹಾಗೂ ಭಾರತದ ಪ್ರತಿನಿಧಿ ವಿ. ಲೀ ನೇತೃತ್ವದ ತಂಡವು ಭೇಟಿ ನೀಡುವ ಸಾಧ್ಯತೆಯಿದೆ. ಆ ನಂತರ ಯಂಗ್‌ ಲಿಯು, ಹೈದರಾಬಾದ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.