ಬೆಂಗಳೂರು: ಆ್ಯಪಲ್ ಐಫೋನ್ ಉತ್ಪಾದನೆಯ ಗುತ್ತಿಗೆ ವಹಿಸಿಕೊಂಡಿರುವ ತೈವಾನ್ ಮೂಲದ ಫಾಕ್ಸ್‌ಕಾನ್ ಸಂಸ್ಥೆಯ ತಮಿಳುನಾಡು ಘಟಕದಲ್ಲಿ ಮತ್ತೆ ಕೆಲಸ ಆರಂಭವಾಗಿದೆ.
ಫಾಕ್ಸ್‌ಕಾನ್ ಹಾಸ್ಟೆಲ್‌ನಲ್ಲಿ ಉದ್ಯೋಗಿಗಳಿಗೆ ನೀಡುತ್ತಿದ್ದ ಆಹಾರದಲ್ಲಿ ವ್ಯತ್ಯಾಸವುಂಟಾಗಿ 159 ಮಂದಿ ಅಸ್ವಸ್ಥರಾಗಿದ್ದರು. ಅದಾದ ಬಳಿಕ ಫಾಕ್ಸ್‌ಕಾನ್ ಕಂಪನಿಯ ನಿರ್ವಹಣೆ ಸರಿಯಿಲ್ಲ ಎಂಬ ವಿಚಾರದಲ್ಲಿ ಪ್ರತಿಭಟನೆ ನಡೆದು ಫ್ಯಾಕ್ಟರಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು.
25 ದಿನಗಳ ಬಳಿಕ ಮತ್ತೆ ಫಾಕ್ಸ್‌ಕಾನ್ ಕಂಪನಿಯಲ್ಲಿ ಉತ್ಪಾದನೆ ಆರಂಭವಾಗಿದೆ. 365 ಉದ್ಯೋಗಿಗಳು ಹಾಸ್ಟೆಲ್‌ಗೆ ಮರಳಿದ್ದು, ಅವರ ಪೈಕಿ 166 ಮಂದಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಶ್ರೀಪೆರಂಬದೂರ್ ಶಾಸಕ ಸೆಲ್ವ ಪೆರುಂಥಗೈ ತಿಳಿಸಿದ್ದಾರೆ.
ಪ್ರತಿಭಟನೆ ಬಳಿಕ ಫಾಕ್ಸ್‌ಕಾನ್ ಚೆನ್ನೈ ಘಟಕದಲ್ಲಿ ನಿರ್ವಹಣಾ ಮಂಡಳಿಯನ್ನು ಕಂಪನಿ ಬದಲಾಯಿಸಿತ್ತು. ಅಲ್ಲದೆ, ಆ್ಯಪಲ್ ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವರದಿ ಕೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.