ನವದೆಹಲಿ: ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಪಿಐ) ನವೆಂಬರ್ ಆರಂಭದಿಂದ 22ರ ವರೆಗೆ ದೇಶದ ಈಕ್ವಿಟಿ ಮಾರುಕಟ್ಟೆಯಿಂದ ₹26,533 ಕೋಟಿ ಬಂಡವಾಳವನ್ನು ವಾಪಸ್ ಪಡೆದಿದ್ದಾರೆ.
ಅಕ್ಟೋಬರ್‌ನಲ್ಲಿ ₹94,017 ಕೋಟಿ ಬಂಡವಾಳದ ಹೊರಹರಿವು ಆಗಿದ್ದರೆ, ಸೆಪ್ಟೆಂಬರ್‌ನಲ್ಲಿ ₹57,724 ಕೋಟಿ ಹೂಡಿಕೆಯಾಗಿತ್ತು. ಇಲ್ಲಿಯವರೆಗೆ ಸಾಲ ಪತ್ರದ ಮಾರುಕಟ್ಟೆಯಲ್ಲಿ ₹1.05 ಲಕ್ಷ ಕೋಟಿ ಹೂಡಿಕೆಯಾಗಿದೆ.
‘ವಿದೇಶಿ ಹೂಡಿಕೆದಾರರು ಚೀನಾದ ಮಾರುಕಟ್ಟೆಯತ್ತ ಹೊರಳಿದ್ದಾರೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಗಳು ನಿರೀಕ್ಷಿಸಿದಷ್ಟು ಲಾಭ ಗಳಿಸಿಲ್ಲ. ಇದರಿಂದ ಬಂಡವಾಳದ ಹೊರಹರಿವು ಹೆಚ್ಚಿದೆ’ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.