ADVERTISEMENT

ಈಕ್ವಿಟಿ ಮಾರುಕಟ್ಟೆಯಿಂದ ₹94 ಸಾವಿರ ಕೋಟಿ ಬಂಡವಾಳ ವಾಪಸ್‌

ಪಿಟಿಐ
Published 3 ನವೆಂಬರ್ 2024, 12:50 IST
Last Updated 3 ನವೆಂಬರ್ 2024, 12:50 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಅಕ್ಟೋಬರ್‌ನಲ್ಲಿ ದೇಶದ ಈಕ್ವಿಟಿ ಮಾರುಕಟ್ಟೆಯಿಂದ ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ₹94 ಸಾವಿರ ಕೋಟಿ ಬಂಡವಾಳವನ್ನು ಹಿಂಪಡೆದಿದ್ದಾರೆ.

2020ರ ಮಾರ್ಚ್‌ನಲ್ಲಿ ₹61,973 ಕೋಟಿ ಬಂಡವಾಳವನ್ನು ವಾಪಸ್‌ ಪಡೆದಿದ್ದರು. ಆ ಬಳಿಕ ಅತಿಹೆಚ್ಚು ಬಂಡವಾಳ ಹಿಂಪಡೆದಿರುವ ತಿಂಗಳು ಇದಾಗಿದೆ.

ಚೀನಾ ಮಾರುಕಟ್ಟೆಯತ್ತ ವಿದೇಶಿ ಹೂಡಿಕೆದಾರರು ಆಕರ್ಷಿತರಾಗಿದ್ದಾರೆ. ಹಾಗಾಗಿ, ದೇಶೀಯ ಷೇರುಪೇಟೆಯಿಂದ ದಾಖಲೆ ಪ್ರಮಾಣದಲ್ಲಿ ಬಂಡವಾಳದ ಹೊರಹರಿವು ಹೆಚ್ಚಾಗಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ADVERTISEMENT

‘ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಇನ್ನೂ ನಿಂತಿಲ್ಲ. ಕೆಲವು ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿದರ ಕಡಿತಗೊಳಿಸಿವೆ. ಚೀನಾದ ಆರ್ಥಕತೆ ಸುಧಾರಣೆಗೆ ಅಲ್ಲಿನ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯು ದೇಶದ ಈಕ್ವಿಟಿ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳ ಒಳಹರಿವಿನ ಮೇಲೆ ಪರಿಣಾಮ ಬೀರಲಿದೆ’ ಎಂದು ಮಾರ್ನಿಂಗ್‌ಸ್ಟಾರ್ ಇನ್ವೆಸ್ಟ್‌ಮೆಂಟ್‌ ರಿಸರ್ಚ್‌ ಇಂಡಿಯಾದ ಸಹಾಯಕ ನಿರ್ದೇಶಕ ಹಿಮಾಂಶು ಶ್ರೀವಾಸ್ತವ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.