ADVERTISEMENT

₹ 40,295 ಕೋಟಿ ಮೊತ್ತದ ಬ್ಯಾಂಕಿಂಗ್ ವಂಚನೆ

ಪಿಟಿಐ
Published 15 ಮೇ 2022, 20:46 IST
Last Updated 15 ಮೇ 2022, 20:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ 2021–22ರಲ್ಲಿ ₹ 40,295 ಕೋಟಿ ಮೊತ್ತದ ವಂಚನೆ ನಡೆದಿದೆ.

ಸರ್ಕಾರಿ ಸ್ವಾಮ್ಯದ 12 ಬ್ಯಾಂಕ್‌ಗಳಲ್ಲಿ 2020–21ರಲ್ಲಿ ₹ 81,921 ಕೋಟಿ ಮೊತ್ತದ ವಂಚನೆ ನಡೆದಿತ್ತು. ಇದಕ್ಕೆ ಹೋಲಿಸಿದರೆ 2021–22ರಲ್ಲಿ ಶೇ 51ರಷ್ಟು ಇಳಿಕೆ ಕಂಡುಬಂದಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ತಿಳಿಸಿದೆ.

ಆದರೆ, ವಂಚನೆಯ ಮೊತ್ತದಲ್ಲಿ ಇಳಿಕೆ ಆಗಿರುವ ಪ್ರಮಾಣದಲ್ಲಿಯೇ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಆಗಿಲ್ಲ. 2020–21ರಲ್ಲಿ 9933 ವಂಚನೆ ಪ್ರಕರಣಗಳು ನಡೆದಿದ್ದವು. 2021–22ರಲ್ಲಿ ಆಗಿರುವ ವಂಚನೆ ಪ್ರಕರಣಗಳ ಸಂಖ್ಯೆ 7,940. ಮಧ್ಯಪ್ರದೇಶದ ಆರ್‌ಟಿಐ ಕಾರ್ಯಕರ್ತ ಚಂದ್ರಶೇಖರ್‌ ಗೌರ್‌ ಅವರು ಕೇಳಿದ್ದ ಪ್ರಶ್ನೆಗೆ ಆರ್‌ಬಿಐ ಈ ವಿವರಗಳನ್ನು ನೀಡಿದೆ.

ADVERTISEMENT

ಪ್ರಮುಖ ಬ್ಯಾಂಕ್‌ಗಳ ವಿವರ (ಕೋಟಿಗಳಲ್ಲಿ)

ಬ್ಯಾಂಕ್‌; ವಂಚನೆ ಮೊತ್ತ

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌; ₹ 9,528

ಎಸ್‌ಬಿಐ; ₹ 6,932

ಬ್ಯಾಂಕ್‌ ಆಫ್‌ ಇಂಡಿಯಾ; ₹ 5,923

ಯೂನಿಯನ್‌ ಬ್ಯಾಂಕ್‌; ₹ 3,989

ಕೆನರಾ ಬ್ಯಾಂಕ್‌; ₹ 3,230

ಇಂಡಿಯನ್‌ ಬ್ಯಾಂಕ್‌; ₹ 2,038

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.