ADVERTISEMENT

ಇಂಧನ ಬೇಡಿಕೆಯಲ್ಲಿ ಹೆಚ್ಚಳ

ಪಿಟಿಐ
Published 13 ನವೆಂಬರ್ 2020, 23:18 IST
Last Updated 13 ನವೆಂಬರ್ 2020, 23:18 IST

ನವದೆಹಲಿ: ದೇಶದ ಮಾರುಕಟ್ಟೆಯಲ್ಲಿ ಇಂಧನ ಬೇಡಿಕೆಯು ಫೆಬ್ರುವರಿ ನಂತರ ಇದೇ ಮೊದಲ ಬಾರಿಗೆ ವಾರ್ಷಿಕ ಹೆಚ್ಚಳ ದಾಖಲಿಸಿದೆ. ದೀಪಾವಳಿ ಹಬ್ಬ ಹತ್ತಿರವಾಗುತ್ತಿರುವ ಕಾರಣ ಡೀಸೆಲ್ ಬೇಡಿಕೆಯಲ್ಲಿ ಹೆಚ್ಚಳ ಕಂಡುಬಂದಿದ್ದು, ಒಟ್ಟಾರೆ ಇಂಧನ ಬೇಡಿಕೆಯು ಕೋವಿಡ್–19 ಪೂರ್ವದ ಸ್ಥಿತಿಗೆ ಬಂದಿದೆ.

ಪೆಟ್ರೋಲಿಯಂ ಉತ್ಪನ್ನಗಳ ಒಟ್ಟು ಬೇಡಿಕೆಯು ಅಕ್ಟೋಬರ್ ತಿಂಗಳಿನಲ್ಲಿ 17.77 ದಶಲಕ್ಷ ಟನ್‌ಗಳಿಗೆ ಹೆಚ್ಚಳವಾಗಿದೆ. ಇದು ಹಿಂದಿನ ವರ್ಷದ ಅಕ್ಟೋಬರ್‌ನಲ್ಲಿ ದಾಖಲಾಗಿದ್ದ ಬೇಡಿಕೆಗೆ ಹೋಲಿಸಿದರೆ ಶೇಕಡ 2.5ರಷ್ಟು ಹೆಚ್ಚು. ದೇಶದಲ್ಲಿ ಪೆಟ್ರೋಲ್‌ ಬೇಡಿಕೆಯು ಕೋವಿಡ್–19 ಪೂರ್ವದ ಸ್ಥಿತಿಗೆ ಸೆಪ್ಟೆಂಬರ್‌ ತಿಂಗಳಿನಲ್ಲಿಯೇ ತಲುಪಿತ್ತು. ಅಕ್ಟೋಬರ್‌ನಲ್ಲಿ ಡೀಸೆಲ್ ಬೇಡಿಕೆ ಕೂಡ ಈ ಹಂತ ತಲುಪಿದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT