ನವದೆಹಲಿ: ದೇಶದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸ್ವಚ್ಛ ಶೌಚಾಲಯಗಳು, ಶಿಶುಪಾಲನಾ ಕೊಠಡಿಗಳಂತಹ ಅಗತ್ಯ ಸೌಲಭ್ಯಗಳನ್ನು ಒದಗಿಸುವ ‘ಹಮ್‌ಸಫರ್ ನೀತಿ’ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಂಗಳವಾರ ಚಾಲನೆ ನೀಡಿದ್ದಾರೆ.
ಹಮ್‌ಸಫರ್ ನೀತಿಯು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸ್ವಚ್ಛ ಶೌಚಾಲಯಗಳು, ಶಿಶುಪಾಲನಾ ಕೊಠಡಿಗಳು, ಗಾಲಿಕುರ್ಚಿಗಳ ಒದಗಿಸುವಿಕೆ, ಇ.ವಿ ಚಾರ್ಜಿಂಗ್ ಕೇಂದ್ರಗಳು, ಪಾರ್ಕಿಂಗ್ ಸೇರಿ ಹಲವು ಉನ್ನತ ಗುಣಮಟ್ಟದ ಸೌಲಭ್ಯ ಒದಗಿಸುತ್ತದೆ. ಈ ನೀತಿಯು ಹೆದ್ದಾರಿ ಬಳಕೆದಾರರಿಗೆ ಅನುಕೂಲಕರ, ಸುರಕ್ಷತೆಯನ್ನು ಒದಗಿಸುತ್ತದೆ. ಉದ್ಯೋಗ ಸೃಷ್ಟಿಸುವ ಜೊತೆಗೆ ಸೇವಾ ಪೂರೈಕೆದಾರರಿಗೆ ಜೀವನೋಪಾಯವನ್ನು ನೀಡಲಿದೆ ಎಂದು ಸಚಿವಾಲಯವು ತಿಳಿಸಿದೆ.
‘ಪ್ರಯಾಣಿಕರು ಮತ್ತು ಚಾಲಕರಿಗೆ ಅತ್ಯಂತ ಸುರಕ್ಷತೆ ಮತ್ತು ಸೌಕರ್ಯಗಳನ್ನು ಈ ನೀತಿಯು ಕಲ್ಪಿಸಲಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗುಣಮಟ್ಟ, ಪ್ರಮಾಣಿತ ಸೇವೆಗಳನ್ನು ಒದಗಿಸಲಾಗುವುದು’ ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಹೆದ್ದಾರಿಗಳಲ್ಲಿ ಉನ್ನತ ದರ್ಜೆಯ ಸೌಕರ್ಯಗಳನ್ನು ಕಲ್ಪಿಸಲು ಬದ್ಧವಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.