ADVERTISEMENT

ಬಾಂಗ್ಲಾ ಬಿಕ್ಕಟ್ಟು; ಜವಳಿಗೆ ತುಸು ಪೆಟ್ಟು: ಸಚಿವೆ ನಿರ್ಮಲಾ ಸೀತಾರಾಮನ್

ಪಿಟಿಐ
Published 10 ಆಗಸ್ಟ್ 2024, 15:28 IST
Last Updated 10 ಆಗಸ್ಟ್ 2024, 15:28 IST
ನಿರ್ಮಲಾ ಸೀತಾರಾಮನ್‌ –ಪಿಟಿಐ ಚಿತ್ರ
ನಿರ್ಮಲಾ ಸೀತಾರಾಮನ್‌ –ಪಿಟಿಐ ಚಿತ್ರ   

ನವದೆಹಲಿ: ‘ಬಾಂಗ್ಲಾದೇಶದಲ್ಲಿ ತಲೆದೋರಿರುವ ಬಿಕ್ಕಟ್ಟಿನಿಂದಾಗಿ ದೇಶದ ಗಾರ್ಮೆಂಟ್‌ ಮತ್ತು ಹೆಣಿಗೆ ಬಟ್ಟೆ ಉದ್ಯಮವು ಕೊಂಚಮಟ್ಟಿಗೆ ಅನಿಶ್ಚಿತತೆ ಎದುರಿಸುತ್ತಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೊಹಮ್ಮದ್‌ ಯೂನಸ್‌ ನೇತೃತ್ವದ ಮಧ್ಯಂತರ ಸರ್ಕಾರವು ಈ ಬಿಕ್ಕಟ್ಟಿಗೆ ಪರಿಹಾರ ಹುಡುಕಲಿದ್ದು, ಶೀಘ್ರವೇ ಬಗೆಹರಿಯಲಿದೆ. ಆ ಬಳಿಕ ಉದ್ಯಮದ ವಹಿವಾಟು ಸಹಜ ಸ್ಥಿತಿಗೆ ಮರಳಲಿದೆ’ ಎಂದು ಹೇಳಿದರು. 

‘ಬಾಂಗ್ಲಾಕ್ಕೆ ಹೊಂದಿರುವ ದೇಶದ ಗಡಿ ಭಾಗಗಳ ರಕ್ಷಣೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ’ ಎಂದರು.

ADVERTISEMENT

ತಮಿಳುನಾಡಿನ ಜವಳಿ ಉದ್ದಿಮೆದಾರರು ಬಾಂಗ್ಲಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಆ ರಾಷ್ಟ್ರದ ರಫ್ತು ಪ್ರಮಾಣ ಹೆಚ್ಚಿದೆ. ಅಲ್ಲಿ ಬಂಡವಾಳ ಹೂಡಿರುವ ಭಾರತೀಯ ಜವಳಿ ಉದ್ದಿಮೆದಾರರು ಭಾರತಕ್ಕೂ ರಫ್ತು ಮಾಡಬಹುದಾಗಿದೆ ಎಂದರು.

‘ಅಲ್ಲಿ ಹೂಡಿಕೆ ಮಾಡಿರುವ ಬಂಡವಾಳ ಸುರಕ್ಷಿತವಾಗಿದೆ. ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ಅಲ್ಲಿನ ಬಿಕ್ಕಟ್ಟು ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.