ADVERTISEMENT

ಜಿಡಿಪಿ ಬೆಳವಣಿಗೆ: ಶೇ 8.2 ದಾಖಲು

ಪಿಟಿಐ
Published 31 ಮೇ 2024, 19:30 IST
Last Updated 31 ಮೇ 2024, 19:30 IST
<div class="paragraphs"><p>ಜಿಡಿಪಿ</p></div>

ಜಿಡಿಪಿ

   

ನವದೆಹಲಿ: ‘ದೇಶದ ಜಿಡಿಪಿ ಬೆಳವಣಿಗೆ ದರವು 2023–24ರ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ (ಜನವರಿ–ಮಾರ್ಚ್‌) ಶೇ 7.8ರಷ್ಟಾಗಿದೆ. ಇದೇ ಆರ್ಥಿಕ ವರ್ಷದ ಇನ್ನುಳಿದ ಮೂರು ತ್ರೈಮಾಸಿಕಗಳಿಗೆ ಹೋಲಿಸಿದರೆ ಕೊನೇ ತ್ರೈಮಾಸಿಕದ ಬೆಳವಣಿಗೆ ದರವು ಕನಿಷ್ಠ ಪ್ರಮಾಣದ್ದಾಗಿದೆ’ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ಶುಕ್ರವಾರ ಹೇಳಿದೆ.

‘ಕೊನೇ ತ್ರೈಮಾಸಿಕದಲ್ಲಿ ಕಡಿಮೆ ಬೆಳವಣಿಗೆ ದರ ದಾಖಲಾಗಿದ್ದರೂ, ದೇಶದ ವಾರ್ಷಿಕ ಬೆಳವಣಿಗೆಯು ಶೇ 8.2ರಷ್ಟು ದಾಖಲಾಗಿದೆ. ತಯಾರಿಕಾ ವಲಯವು ಹೆಚ್ಚಿನ ಬೆಳವಣಿಗೆ ತೋರಿದ್ದರಿಂದ ಈ ಅನುಕೂಲವಾಗಿದೆ. 2022–23ರ ಆರ್ಥಿಕ ವರ್ಷದಲ್ಲಿ ದೇಶದ ಬೆಳವಣಿಗೆಯ ದರವು ಶೇ 7ರಷ್ಟಿತ್ತು’ ಎಂದು ಎನ್‌ಎಸ್‌ಒ ತನ್ನ ವರದಿಯಲ್ಲಿ ಹೇಳಿದೆ.

ADVERTISEMENT

‘ಶೇ 8.2ರಷ್ಟಾಗಿರುವ ಬೆಳವಣಿಗೆ ದರದ ಕಾರಣದಿಂದಾಗಿ ದೇಶದ ಅರ್ಥಿಕತೆಯ 3.5 ಲಕ್ಷ ಕೋಟಿ ಡಾಲರ್‌ಗೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಆರ್ಥಿಕತೆಯು 5 ಲಕ್ಷ ಕೋಟಿ ಡಾಲರ್‌ನಷ್ಟಾಗಲು ಇದು ಸಹಕಾರಿಯಾಗಲಿದೆ’ ಎಂದು ಎನ್‌ಎಸ್‌ಒ ಅಭಿಪ್ರಾಯಪಟ್ಟಿದೆ. 2024ರ ಮೊದಲ ಮೂರು ತಿಂಗಳಲ್ಲಿ ಚೀನಾವು ಶೇ 5.3ರಷ್ಟು ಆರ್ಥಿಕ ಬೆಳವಣಿಗೆಯನ್ನು ದಾಖಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.