ನವದೆಹಲಿ: ಕೋವಿಡ್–19 ಸಾಂಕ್ರಾಮಿಕದ ಸಂದರ್ಭದಲ್ಲಿ ಪುರುಷ ಹಾಗೂ ಮಹಿಳಾ ಉದ್ಯೋಗಿಗಳ ನಡುವಿನ ವೇತನ ತಾರತಮ್ಯವು ಹೆಚ್ಚಳ ಆಗಿದೆ ಎಂದು ಎಡಿಪಿ ಅಧ್ಯಯನ ವರದಿ ಹೇಳಿದೆ. ವೇತನ ಹೆಚ್ಚಳ ಹಾಗೂ ಬೋನಸ್ ನೀಡುವ ವಿಚಾರದಲ್ಲಿ ಮಹಿಳೆಯರನ್ನು ಉಪೇಕ್ಷಿಸಲಾಗಿದೆ ಎಂದು ಅದು ಹೇಳಿದೆ.
ಹೆಚ್ಚಿನ ಜವಾಬ್ದಾರಿಗಳನ್ನು ಹೊತ್ತುಕೊಂಡ ಶೇಕಡ 65ರಷ್ಟು ಮಹಿಳೆಯರಿಗೆ ಮಾತ್ರ ವೇತನ ಹೆಚ್ಚಳದ ಖುಷಿ ಸಿಕ್ಕಿದೆ ಎಂದು ಎಡಿಪಿ ವರದಿಯು ಹೇಳಿದೆ. ಆದರೆ, ಪುರುಷರ ಪೈಕಿ ಶೇಕಡ 70ರಷ್ಟು ಜನರಿಗೆ ವೇತನ ಏರಿಕೆ ದೊರೆತಿದೆ. ಈ ವರದಿ ಸಿದ್ಧಪಡಿಸುವುದಕ್ಕಾಗಿ ಎಡಿಪಿ ಸಂಶೋಧನಾ ಸಂಸ್ಥೆಯು 17 ದೇಶಗಳಲ್ಲಿನ ಒಟ್ಟು 32,471 ಉದ್ಯೋಗಿಗಳನ್ನು ಸಂಪರ್ಕಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.