ADVERTISEMENT

ಬಸ್‌ಗಳಲ್ಲಿ ಸೀಟ್‌ ಬೆಲ್ಟ್‌ ಕಡ್ಡಾಯಗೊಳಿಸಿ: ಐಆರ್‌ಎಫ್‌ ಒತ್ತಾಯ

ಪಿಟಿಐ
Published 24 ಫೆಬ್ರುವರಿ 2024, 15:43 IST
Last Updated 24 ಫೆಬ್ರುವರಿ 2024, 15:43 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಬಸ್‌ಗಳು ಸೇರಿದಂತೆ ಭಾರಿ ವಾಹನಗಳಲ್ಲಿ ಸೀಟ್ ಬೆಲ್ಟ್‌ಗಳನ್ನು ಕಡ್ಡಾಯವಾಗಿ ಬಳಸುವಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವನ್ನು ಜಾಗತಿಕ ರಸ್ತೆ ಸುರಕ್ಷತಾ ಸಂಸ್ಥೆಯಾದ ಇಂಟರ್‌ ನ್ಯಾಷನಲ್‌ ರೋಡ್ ಫೆಡರೇಶನ್ (ಐಆರ್‌ಎಫ್‌) ಒತ್ತಾಯಿಸಿದೆ.

ಐಆರ್‌ಎಫ್ ಅಧ್ಯಕ್ಷ ಕೆ.ಕೆ. ಕಪಿಲ ಅವರು ಸಚಿವಾಲಯಕ್ಕೆ ಬರೆದ ಪತ್ರದಲ್ಲಿ ಬಸ್‌ಗಳಲ್ಲಿ ಸೀಟ್ ಬೆಲ್ಟ್‌ಗಳನ್ನು ಒದಗಿಸುವ ತುರ್ತು ಅಗತ್ಯವಿದ್ದು, ಅದನ್ನು ಕಡ್ಡಾಯಗೊಳಿಸಬೇಕಾಗಿದೆ. ರಸ್ತೆ ಅಪಘಾತಗಳಲ್ಲಿ ಸಾವು ನೋವುಗಳು ಮತ್ತು ಗಾಯಗಳನ್ನು ಕಡಿಮೆ ಮಾಡಲು ಈ ಕ್ರಮ ಅಗತ್ಯವಾಗಿದೆ. ಬಸ್ ಅಪಘಾತಗಳಿಂದಾಗಿ ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಒಂದು ವೇಳೆ ಸೀಟ್ ಬೆಲ್ಟ್ ಧರಿಸಿದ್ದರೆ ಅವರಲ್ಲಿ ಅನೇಕರನ್ನು ಉಳಿಸಬಹುದಿತ್ತು ಎಂದು ಹೇಳಿದ್ದಾರೆ.

ADVERTISEMENT

ಕಟ್ಟುನಿಟ್ಟಾದ ಸುರಕ್ಷತಾ ಮಾನದಂಡಗಳಿಂದಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಗಮನಾರ್ಹ ಫಲಿತಾಂಶಗಳನ್ನು ಸಾಧಿಸಿದ್ದು, ಇದರಿಂದಾಗಿ ಇಲ್ಲಿ ಅಪಘಾತಗಳ ಸಂಖ್ಯೆ ಕಡಿಮೆ ಆಗಿದೆ. ಆದರೆ, ಭಾರತದಲ್ಲಿನ ಅಂಕಿ ಅಂಶವು ಬಸ್‌ಗಳಲ್ಲಿ ಸುರಕ್ಷತಾ ಮಾನದಂಡಗಳನ್ನು ಕಡ್ಡಾಯಗೊಳಿಸುವಲ್ಲಿ ಲೋಪವನ್ನು ಸೂಚಿಸುತ್ತದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.