ADVERTISEMENT

ಗೋ ಫಸ್ಟ್‌ ಖರೀದಿ ಆಸಕ್ತಿ: ಒಂದೂ ಅರ್ಜಿ ಸಲ್ಲಿಕೆ ಆಗಿಲ್ಲ!

​ಪ್ರಜಾವಾಣಿ ವಾರ್ತೆ
Published 22 ಜುಲೈ 2023, 15:39 IST
Last Updated 22 ಜುಲೈ 2023, 15:39 IST
ಗೋ ಫಸ್ಟ್‌
ಗೋ ಫಸ್ಟ್‌   

ಮುಂಬೈ: ಗೋ ಫಸ್ಟ್‌ ಕಂಪನಿಯನ್ನು ಖರೀದಿಸುವ ಸಂಬಂಧ ಅರ್ಹ 40 ಹೂಡಿಕೆದಾರರು ವಿವರಗಳನ್ನು ಪಡೆದುಕೊಂಡಿದ್ದಾರೆ. ಆದರೆ ಖರೀದಿ ಆಸಕ್ತಿ ವ್ಯಕ್ತಪ‍ಡಿಸಿ ಯಾವುದೇ ಅರ್ಜಿ ಸಲ್ಲಿಕೆ ಆಗಿಲ್ಲ ಎಂದು ಬ್ಯಾಂಕಿಂಗ್‌ ಮೂಲಗಳು ಹೇಳಿವೆ.

ಕಂಪನಿಯನ್ನು ಖರೀದಿಸುವ ಆಸಕ್ತಿ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಲು ಆಗಸ್ಟ್‌ 9ರ ಗಡುವು ನೀಡಲಾಗಿದೆ.

ಗೋ ಫಸ್ಟ್‌ ಕಂಪನಿಯಿಂದ ₹23,780 ಕೋಟಿ ಪಾವತಿ ಆಗಬೇಕಿದೆ ಎಂದು ಹಣಕಾಸು ಸಂಸ್ಥೆಗಳು ಗೋ ಫಸ್ಟ್‌ಗೆ ತಿಳಿಸಿವೆ ಎಂದು ಬ್ಯಾಂಕಿಂಗ್‌ ಮೂಲಗಳು ಹೇಳಿವೆ.

ADVERTISEMENT

ದಿವಾಳಿ ಪ್ರಕ್ರಿಯೆ ನಿರ್ವಹಿಸಲು ನೇಮಕ ಆಗಿರುವ ವೃತ್ತಿಪರ ಅಧಿಕಾರಿಯು ಅದನ್ನು ದೃಢೀಕರಿಸಬೇಕಿದೆ. ಈ ಕುರಿತು ಅಧಿಕಾರಿಯು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಸುದ್ದಿಸಂಸ್ಥೆಯು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.