ADVERTISEMENT

ಪುನಶ್ಚೇತನ ಯೋಜನೆ ಸಲ್ಲಿಸಿದ ಗೋ ಫಸ್ಟ್

​ಪ್ರಜಾವಾಣಿ ವಾರ್ತೆ
Published 2 ಜೂನ್ 2023, 16:08 IST
Last Updated 2 ಜೂನ್ 2023, 16:08 IST
ಗೋ ಫಸ್ಟ್
ಗೋ ಫಸ್ಟ್    

ಮುಂಬೈ: ಗೋ ಫಸ್ಟ್ ವಿಮಾನಯಾನ ಕಂಪನಿಯು ಪುನಶ್ಚೇತನ ಯೋಜನೆಯನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (ಡಿಜಿಸಿಎ) ಸಲ್ಲಿಸಿದ್ದು, 26 ವಿಮಾನಗಳೊಂದಿಗೆ ಮತ್ತೆ ಕಾರ್ಯಾಚರಣೆ ಆರಂಭಿಸುವ ಉದ್ದೇಶ ಹೊಂದಿದೆ ಎಂದು ಮೂಲಗಳು ಹೇಳಿವೆ.

ಕಾರ್ಯಾಚರಣೆ ಬಂಡವಾಳ ಸಂಗ್ರಹಿಸಲು ಕಂಪನಿಯು ಹಣಕಾಸು ಸಂಸ್ಥೆಗಳ ಜೊತೆ ಮಾತುಕತೆ ನಡೆಸಿದೆ ಎಂದು ಗೊತ್ತಾಗಿದೆ. ಕಂಪನಿಯು ಮೇ 3ರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿದೆ.

ಕಂಪನಿಗೆ ವೇತನ ಪಾವತಿಗೆ ಪ್ರತಿ ತಿಂಗಳು ₹30 ಕೋಟಿ ಅಗತ್ಯವಿದೆ. ಪುನಶ್ಚೇತನ ಯೋಜನೆಗೆ ಡಿಜಿಸಿಎ ಒಪ್ಪಿಗೆ ನೀಡಿದ ತಕ್ಷಣ ಕಂಪನಿಯ ಸೇವೆಗಳು ಆರಂಭವಾಗಲಿವೆ ಎಂದು ಮೂಲಗಳು ವಿವರಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.