ನವದೆಹಲಿ: ದಿವಾಳಿ ಪ್ರಕ್ರಿಯೆಯಲ್ಲಿ ಇರುವ ಗೋ ಫಸ್ಟ್ ವಿಮಾನಯಾನ ಕಂಪನಿಯನ್ನು ಖರೀದಿಸಲು ಆಸಕ್ತಿ ಸೂಚಿಸಿ ಬಿಡ್ ಸಲ್ಲಿಸಲು ಆಗಸ್ಟ್ 9ರ ಗಡುವು ನೀಡಲಾಗಿದೆ.
ಈ ಸಂಬಂಧ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ನೇಮಿಸಿರುವ ಅಧಿಕಾರಿಯು (ಆರ್‌ಪಿ) ಖರೀದಿ ಆಸಕ್ತಿ ವ್ಯಕ್ತಪಡಿಸಲು ಹೂಡಿಕೆದಾರರಿಗೆ ಆಹ್ವಾನ ನೀಡಿದ್ದಾರೆ.
ಅರ್ಹ ಹೂಡಿಕೆದಾರರ ಪಟ್ಟಿಯನ್ನು ಆಗಸ್ಟ್ 19ರಂದು ಘೋಷಿಸಲಾಗುವುದು. ಆಕ್ಷೇಪಣೆ ಸಲ್ಲಿಸಲು ಆಗಸ್ಟ್ 24ರವರೆಗೆ ಕಾಲಾವಕಾಶ ಇರಲಿದೆ ಎಂದು ಆರ್‌ಪಿ ಶೈಲೇಂದ್ರ ಅಜ್ಮೇರ್ ಅವರು ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.