ADVERTISEMENT

‘ವೋಕಲ್‌ ಫಾರ್ ಲೋಕಲ್‌‘ ಅಭಿಯಾನಆನ್‌ಲೈನ್‌ಲ್ಲಿ ಕೈಮಗ್ಗ ವಸ್ತುಗಳ ಮಾರಾಟ

​ಪ್ರಜಾವಾಣಿ ವಾರ್ತೆ
Published 28 ಮೇ 2020, 13:46 IST
Last Updated 28 ಮೇ 2020, 13:46 IST
ಕೈಮಗ್ಗ ಸೀರೆ
ಕೈಮಗ್ಗ ಸೀರೆ   

ಕೊರೊನಾ– ದಿಗ್ಭಂದನ ದೇಶದಾದ್ಯಂತ 10 ದಶಲಕ್ಷದಷ್ಟು ಕರಕುಶಲ ಕರ್ಮಿಗಳು ಹಾಗೂ ನೇಕಾರರ ಮೇಲೆ ಪರಿಣಾಮ ಬೀರಿರಬಹುದೆಂದು ಅಂದಾಜಿಸಲಾಗುತ್ತಿದೆ. ಈ ವರ್ಗದವರು ತಯಾರಿಸಿರುವ ಕರಕುಶಲ ವಸ್ತುಗಳು, ಕೈಮಗ್ಗದಲ್ಲಿ ನೇಯ್ದ ಬಟ್ಟೆಗಳು ಮಾರಾಟವಾಗದೇ ಉಳಿದಿವೆ. ಪರಿಣಾಮವಾಗಿ ಈ ಉದ್ಯಮವನ್ನು ಅವಲಂಬಿಸಿರುವವರಿಗೆ ನಿತ್ಯ ಜೀವನ ನಡೆಸಲು ತೊಂದರೆಯಾಗಿದೆ.

ಈ ಹಿನ್ನೆಯಲ್ಲಿ ಕುಶಲಕರ್ಮಿಗಳು ತಯಾರಿಸಿರುವ ಉತ್ಪನ್ನಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡಲು ‘ವೋಕಲ್ ಫಾರ್ ಲೋಕಲ್’ ಅಭಿಯಾನ ಆರಂಭಿಸಲಾಗಿದೆ. ಇದರ ಅಂಗವಾಗಿ ಇದೇ ಮೇ 21ರಿಂದ 27ರವರೆಗೆ ‘ಗೋಕೂಪ್‘(gocoop.com)‌ ಆನ್‌ಲೈನ್ ಮಾರುಕಟ್ಟೆ ಮೂಲಕ ಗೋ ಸ್ವದೇಶಿ ಉತ್ಪನ್ನಗಳ (ಕರಕುಶಲ ವಸ್ತುಗಳೂ ಸೇರಿ) ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸಲಾಗಿದೆ. ಈ ಡಿಜಿಟಲ್ ಮಾರುಕಟ್ಟೆ ವೇದಿಕೆಯಲ್ಲಿ ದೇಶದ ಮೂಲೆ ಮೂಲೆಯಲ್ಲಿರುವ ನೇಕಾರರು ಹಾಗೂ ಕರಕುಶಲಕರ್ಮಿಗಳು ತಾವು ತಯಾರಿಸಿರುವ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿರುವ ನೇಕಾರರು ಮತ್ತು ಕರಕುಶಲಕರ್ಮಿಗಳು ತಯಾರಿಸಿರುವ ಕೈಮಗ್ಗ ಹಾಗೂ ದೇಸಿ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸವುದು ಈ ಅಭಿಯಾನದ ಉದ್ದೇಶ.ಶ್ರೀ

ಏನೇನು ವಸ್ತುಗಳಿರುತ್ತವೆ?
ಏಳು ದಿನಗಳ ಕಾಲ ನಡೆಯುವ ಈ ಆನ್‌ಲೈನ್‌ ಮೇಳದಲ್ಲಿ ಆಂಧ್ರ ಉಪ್ಪಡ ಸೀರೆಗಳು, ಕರ್ನಾಟಕದ ಮೊಳಕಾಲ್ಮೂರು ಸೀರೆಗಳು, ಪಶ್ಚಿಮ ಬಂಗಾಳದ ವಿಭಿನ್ನ ಜಮ್ದಾನಿ ಹಾಗೂ ಟಂಗೈಲ್ ಸೀರೆಗಳು, ಮಹೇಶ್ವರಿಗಳು ಹಾಗೂ ಚಂದೇರಿ ಸೀರೆಗಳು, ಪೋಚಂಪಳ್ಳಿ ಹಾಗೂ ಟುಸ್ಸಾರ್ ಸೀರೆಗಳು ಮೇಳದಲ್ಲಿರುತ್ತವೆ.

ADVERTISEMENT

ಇದರ ಜತೆಗೆ ಅಸ್ಸಾಂ, ಬಿಹಾರ, ಛತ್ತೀಸಗಡ, ಗುಜರಾತ, ಜಮ್ಮು ಮತ್ತು ಕಾಶ್ಮೀರ, ಮಧ್ಯಪ್ರದೇಶ, ಒಡಿಶಾ, ರಾಜಸ್ಥಾನ, ತೆಲಂಗಾಣ, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದ ಕರಕುಶಲ ವಸ್ತುಗಳು, ಲಂಬಾಣಿ ಸಮುದಾಯದವರು ಮಾಡಿದ ಕಸೂತಿ ಬಟ್ಟೆಗಳು, ಡ್ರೆಸ್ ಮೆಟೀರಿಯಲ್‍ಗಳು, ಸ್ಟೋಲ್‍ಗಳು, ದುಪ್ಪಟ್ಟಾಗಳು, ಪುರುಷರ ಉಡುಪುಗಳು ಹಾಗೂ ಗೃಹಾಲಂಕಾರದ ವಸ್ತುಗಳಿರುತ್ತವೆ. ಗೃಹಾಲಂಕಾರಿಕ ವಸ್ತುಗಳು, ಮಹಿಳೆಯರ ಆಭರಣಗಳು ದೊರೆಯಲಿವೆ. ₹500 ಬೆಲೆಯಿಂದ ₹50ಸಾವಿರ ಬೆಲೆಯವರೆಗಿನ ವಸ್ತುಗಳು ಪ್ರದರ್ಶನದಲ್ಲಿ ಲಭ್ಯವಿವೆ.

ಗೋಸ್ವದೇಶಿ ಆನ್‍ಲೈನ್ ಮಾರಾಟ ಮೇಳ ವೀಕ್ಷಣೆ ಮತ್ತು ಖರೀದಿಗಾಗಿ https://gocoop.com/goswadeshi ಈ ಜಾಲತಾಣಕ್ಕೆ ಭೇಟಿ ನೀಡಿ. ಕೈಮಗ್ಗದ ವಸ್ತುಗಳನ್ನು ಖರೀದಿಸುವ ಮೂಲಕ ನೇಯ್ಗೆದಾರರಿಗೆ ಹಾಗೂ ಕರಕುಶಲಕರ್ಮಿಗಳಿಗೆ ಬೆಂಬಲ ನೀಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.