ADVERTISEMENT

ಗೊದ್ರೇಜ್ ಇಂಡಸ್ಟ್ರೀಸ್‌ ಷೇರು ಕುಸಿತ

ಪಿಟಿಐ
Published 2 ಮೇ 2024, 15:14 IST
Last Updated 2 ಮೇ 2024, 15:14 IST
Godrej
Godrej   

ನವದೆಹಲಿ: ಗೊದ್ರೇಜ್‌ ಸಮೂಹದ ಆಸ್ತಿ ಇಬ್ಭಾಗದ ಬಗ್ಗೆ ಗುರುವಾರ ಷೇರುಪೇಟೆ ವಹಿವಾಟಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. 

ಗೊದ್ರೇಜ್ ಇಂಡಸ್ಟ್ರೀಸ್‌ ಷೇರಿನ ಮೌಲ್ಯವು ಶೇ 7.15ರಷ್ಟು ಕುಸಿದಿದೆ. ಗೊದ್ರೇಜ್‌ ಪ್ರಾಪರ್ಟೀಸ್‌ ಷೇರಿನ ಮೌಲ್ಯ ಶೇ 4ರಷ್ಟು ಹಾಗೂ ಆಸ್ಟೆಕ್‌ ಲೈಫ್‌ಸೈನ್ಸಸ್‌ ಷೇರಿನ ಮೌಲ್ಯವು ಶೇ 3ರಷ್ಟು ಇಳಿಕೆಯಾಗಿದೆ. ಆದರೆ, ಗೊದ್ರೇಜ್ ಆಗ್ರೋವೆಟ್‌ ಷೇರಿನ ಮೌಲ್ಯ ಶೇ 3.5ರಷ್ಟು ಮತ್ತು ಗೊದ್ರೇಜ್‌ ಗ್ರಾಹಕ ವಸ್ತುಗಳ ಕಂಪನಿಯ ಷೇರುಗಳು ಶೇ 1ರಷ್ಟು ಏರಿಕೆ ಕಂಡಿವೆ.

ಕೋಟಕ್‌ ಬ್ಯಾಂಕ್‌ಗೆ ₹9,532 ಕೋಟಿ ನಷ್ಟ: 

ADVERTISEMENT

ಕೋಟಕ್‌ ಮಹೀಂದ್ರ ಬ್ಯಾಂಕ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ.ವಿ.ಎಸ್‌. ಮಣಿಯನ್‌ ಅವರು, ತಮ್ಮ ಹುದ್ದೆಗೆ ದಿಢೀರ್‌ ರಾಜೀನಾಮೆ ನೀಡಿರುವುದು ಕಂಪನಿಯ ಮಾರುಕಟ್ಟೆ ಮೌಲ್ಯದ ಮೇಲೆ ಪರಿಣಾಮ ಬೀರಿದೆ.

ಷೇರಿನ ಮೌಲ್ಯವು ಶೇ 3ರಷ್ಟು ಇಳಿಕೆ ಕಂಡಿದ್ದು, ಒಂದೇ ದಿನ ಬ್ಯಾಂಕ್‌ನ ಮಾರುಕಟ್ಟೆ ಮೌಲ್ಯ ₹9,532 ಕೋಟಿ ಕರಗಿದೆ. ಒಟ್ಟು ಎಂ–ಕ್ಯಾಪ್‌ ₹3.13 ಲಕ್ಷ ಆಗಿದೆ.   

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 128 ಅಂಶ ಏರಿಕೆಯಾಗಿ 74,611ಕ್ಕೆ ಸ್ಥಿರಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 43 ಅಂಶ ಹೆಚ್ಚಳವಾಗಿ 22,648ಕ್ಕೆ ಕೊನೆಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.