ADVERTISEMENT

Gold and Silver Rate: ಚಿನ್ನ ದರ ₹1,150, ಬೆಳ್ಳಿ ದರ ₹ 2 ಸಾವಿರ ಇಳಿಕೆ

ಪಿಟಿಐ
Published 25 ಅಕ್ಟೋಬರ್ 2024, 13:00 IST
Last Updated 25 ಅಕ್ಟೋಬರ್ 2024, 13:00 IST
<div class="paragraphs"><p>ಚಿನ್ನ </p></div>

ಚಿನ್ನ

   

ನವದೆಹಲಿ: ಸತತ ಏರಿಕೆ ಕಂಡಿದ್ದ ಚಿನ್ನದ ದರ ಶನಿವಾರ ಇಳಿಕೆಯಾಗಿದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ ₹ 1,150 ಇಳಿಕೆಯಾಗಿ ₹80,050ಗೆ ಬಂದು ಮುಟ್ಟಿದೆ.

ಬೆಳ್ಳಿ ದರವೂ ಇಳಿಕೆ ಹಾದಿ ಕಂಡಿದ್ದು, 1 ಕೆ.ಜಿ ಬೆಳ್ಳಿ ದರ ₹ 99 ಸಾವಿರಕ್ಕೆ ಇಳಿಕೆಯಾಗಿದೆ. ಗುರುವಾರ ಬೆಳ್ಳಿ ದರ ಕೆ.ಜಿಗೆ ₹ 1.01 ಲಕ್ಷ ಇತ್ತು. ಒಟ್ಟು ₹ 2 ಸಾವಿರ ಅಗ್ಗವಾಗಿದೆ.

ADVERTISEMENT

ಶೇ 99.5 ರಷ್ಟು ಶುದ್ಧತೆಯ ಚಿನ್ನದ ದರ 10 ಗ್ರಾಂಗೆ ₹350 ಇಳಿಕೆಯಾಗಿ ₹ 80,450 ಕ್ಕೆ ತಲುಪಿದೆ. ಶೇ 99.9 ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ ₹150 ಕಡಿಮೆಯಾಗಿ ₹ 80,050ಗೆ ಇಳಿಕೆಯಾಗಿದೆ.

ಸ್ಥಳೀಯ ಮಾರುಕಟ್ಟೆಯಲ್ಲಿ ಚಿನ್ನಾಭರಣ ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಂದ ಬೇಡಿಕೆ ಕಡಿಮೆಯಾಗಿದೆ ಇದು ಬೆಲೆ ಇಳಿಕೆಗೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.